ಸೋಮವಾರ, ಜೂನ್ 07, 2021

ಡಾ.ರವೀಂದ್ರ ಮುಂಡ್ಕೂರು ಜೊತೆಗಿನ ಒಡನಾಟ.

 

ಭೂವಿಜ್ಞಾನಿ, ತುಳು ವಿಕಿಪೀಡಿಯ ಸಂಪಾದಕ, ಬ್ಲಾಗ್‌( ಬ್ಲಾಗ್ ಕೊಂಡಿ - ಸಂಶೋಧನಾ ಲೇಖನ ಗಳ ಗುಚ್ಛ. ಇನ್ನೊಂದು ಬ್ಲಾಗ್  ಬರಹಗಾರ ಡಾ.ರವೀಂದ್ರ ಮುಂಡ್ಕೂರು ಇವರು ದಿನಾಂಕ 09.05.2021ರಂದು ದೈವಾಧೀನರಾದರು. ಶಾಂತ ಸ್ವರೂಪ ಇವರದು, ಎಲ್ಲಿಯೂ ವಾದಕ್ಕೆ ಇಳಿಯದೆ ಅವುಗಳ ಕುರಿತು ಅಧ್ಯಯನ ನಡೆಸುವ, ಅಧ್ಯಯನಶೀಲರು, ತುಳು, ಕನ್ನಡ ವಿಕಿಪೀಡಿಯ, ತುಳು ವಿಕ್ಷನರಿ ಹೀಗೆನೆ ಅನೇಕ ಕೆಲಸ ಮಾಡಿದ್ದಾರೆ. ಕರಾವಳಿ ವಿಕಿಪೀಡಿಯನ್ ಯೂಸರ್ ಗುಂಪು ಇದರ ಸದಸ್ಯರಾಗಿದ್ದರು. ಬಹುಶಃ ನೆನಪಿರುವಂತೆ ರವಿಮಂ ರವರ ಪರಿಚಯ ನನಗೆ ಆದದ್ದು ಮೂರು ವರ್ಷಗಳ ಹಿಂದೆ. ತುಳು ವಿಕಿಪೀಡಿಯ ಬೆಳವಣಿಗೆಯ ಹಂತದಲ್ಲಿ ಇತ್ತು, ಲೇಖನಗಳ ಕೊರತೆ ಎದರಿಸುತ್ತಿದ್ದ ಕಾಲ ಅದು. ರವಿಮಂ ರವರನ್ನು ಮೊದಲು ಕಂಡ ನೆನಪು. ಮೊದಲ ಭೇಟಿಯಲ್ಲಿ ಒಂದು ಪುಸ್ತಕವನ್ನು ಅವರು ಕೊಟ್ಟಿದ್ದರು. ನಂತರ ಅನೇಕ ಕಾರ್ಯಕ್ರಮಗಳಲ್ಲಿ ಭೇಟಿಯಾಗಿದ್ದೆವು (ಮಂಗಳೂರು, ಬೆಂಗಳೂರಿನಲ್ಲಿ ನಡೆದ ವಿಕಿಪೀಡಿಯ ಸಂಬಂಧಿಸಿದ ಕಾರ್ಯಕ್ರಮಗಳು ಮಾತ್ರ) ತುಳುವಿಗಾಗಿ ಯಾವುದೆ ಹಣದ  ಆಸೆಯಿಲ್ಲದೆ, ನಿಸ್ವಾರ್ಥ ಸೇವೆ ಇವರದು ಎಂದರು ತಪ್ಪಾಗದು. ತುಳುವಿನ ಮೇಲೆ ಮಮಕಾರ ಇರುವುದು ಏನೊ?!. ಗೊತ್ತಿಲ್ಲ . ಇತ್ತಿಚೀನ ದಿನಗಳಲ್ಲಿ ತುಳು ವಿಕ್ಷನರಿಯ ಮೇಲೆ ಒಳ್ಳೆಯ ಕೆಲಸವನ್ನು ಅವರು ಮಾಡಿದ್ದಾರೆ.  ತುಳುವಿಗೆ ಒಂದಷ್ಟು ಕೊಡುಗೆ ಇವರದು ಇದೆ ಎಂದರು ತಪ್ಪಾಗದು. ಇವರು ಅನೇಕ ವಿಜ್ಞಾನ ಲೇಖನಗಳನ್ನು ತುಳು ವಿಕಿಪೀಡಿಯಕ್ಕೆ ಬರೆದಿದ್ದಾರೆ. ತುಳು ವಿಕಿಗೆ ವಿಜ್ಞಾನ  ಲೇಖನಗಳ ಬರ ಇತ್ತು, ಅವಾಗ ಸಿಕ್ಕ ಸಂಜೀವಿನಿ ರವಿಮಂ. ನಾನು ಕಂಡ ತುಳು ವಿಕಿಪೀಡಿಯದ ಒಳ್ಳೆಯ ಸಂಪಾದಕ ಇವರು. 

ಕಾಮೆಂಟ್‌ಗಳಿಲ್ಲ: