ಭಾನುವಾರ, ಆಗಸ್ಟ್ 19, 2018

ತುಳು ಕನ್ನಡ ಸಮ್ಮಿಲನ

ಬೆಂಗಳೂರಿನ  ಸಿಐಎಸ್ಕೆಯ ಆಶ್ರಯದಲ್ಲಿ ದಿನಾಂಕ 19\8\2018ರಂದು ನಡೆಯಿತು.ತುಳು ಕನ್ನಡ ಸಮುದಾಯದ ಸಮ್ಮಿಲನ.

       ಈ ಕೆಳಗಿನ ವಿಷಯದ ಕುರಿತು ನಡೆಯಿತು
  1. ಕನ್ನಡ ವಿಕಿಪೀಡಿಯದಲ್ಲಿ ಮುಂದೆ ನಡೆಸಬೇಕಾದ ಕಾರ್ಯಗಳು.
  2. ನಡೆಯುತ್ತಿರುವ ಯೋಜನೆಗಳನ್ನು ಅಭಿವೃದ್ಧಿಪಡಿಸುವುದು.
  3. ವಿಕಿಯ ಮುಂದುವರಿದ ತರಬೇತಿಯಲ್ಲಿ ಕಲಿತ ವಿಚಾರಗಳನ್ನು ಹಂಚಿಕೊಳ್ಳುವುದು.-ವಿಕಾಸ್ ಹೆಗಡೆ, ಮಂಜಪ್ಪ.
  4.  ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ಜರುಗಿದ ವಿಕಿಮಾನಿಯಾದಲ್ಲಿ ಕಲಿತ ವಿಷಯ -ಪವನಜ.
  5. ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಶಿಕ್ಷಣ ಯೋಜನೆ 
  6. ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವಿಕಿಪೀಡಿಯ ಸಂಘ -ಅಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಹಾಗೂ ಅಶೋಕ್ ಸರ್ 
  7. ವಿಕಿಡೇಟಾ ಲೇಬಲ್ ಸಂಪಾದನೋತ್ಸವ 
  8. ಮಹಿಳಾ ಕೇಂದ್ರಿತ ಸಂಪಾದನೋತ್ಸವಗಳ ವರದಿ.

ಗುರುವಾರ, ಫೆಬ್ರವರಿ 22, 2018

TTT2K18ಕೆಯಲ್ಲಿ ನನಗೆ ಕಂಡ ವಿಷಯಗಳ ಮಾಹಿತಿ.

TTT2K18ನ ತರಬೇತಿ ಕಾರ್ಯಕ್ರಮವು ಮೈಸೂರಿನ ಜೆ.ಪಿ.ಪಾರ್ಚುನ್ ಹೋಟೆಲಿನ ಸಭಾಭವನದಲ್ಲಿ ನಡೆಯಿತು. ಇದರಲ್ಲಿ ಸುಮಾರು ೧೭ ಭಾಷೆಯ ವಿಕಿಮೀಡಿಯ ದ ಸಂಪಾದಕರು ಭಾಗವಹಿಸಿದ್ದರು. ಈ ಕಾರ್ಯಕ್ರಮವು ವಿಕಿಪೀಡಿಯ ಸಂಪಾದಕರಿಗೆ ಬಹಳ ಮುಖ್ಯವಾದ ತರಬೇತಿ ಯಾಗಿತ್ತು. ತರಬೇತಿ ದಾರರ ತರಬೇತಿ ಕಾರ್ಯಕ್ರಮಕ್ಕೆ Cis ಪ್ರಾಯೋಜಕತ್ವದಲ್ಲಿ ನಡೆಯಿತು. Cisನ Titu Dattu ಮತ್ತು ತನ್ವೀರ್ ಹಸನ್ ರವರ ನೇತ್ರತ್ವದಲ್ಲಿ ನಡೆಸಿದರು.
ಇದರ ಪ್ರಯೋಜನಗಳು :

* ನಾಯಕತ್ವದ ಗುಣವನ್ನು ಬೇಳೆಸುತ್ತದೆ.
* ಮಹಿಳಾ ಸುರಕ್ಷತೆಯ ಬಗೆಗೆ ಮಾಹಿತಿ ನೀಡುತ್ತದೆ.
* ವಿಕಿಪೀಡಿಯದ ಬೇರೆ ಬೇರೆ ಯೋಜನೆಗಳಲ್ಲಿ ತಮ್ಮ ಭಾಗವಹಿಸುವಿಕೆಯನ್ನು ತಿಳಿಸುತ್ತದೆ.
* ಕಾರ್ಯಕ್ರಮ ಸಂಘಟನೆಯ ಬಗೆಗೆ ಸಮುದಾಯದ ಸಹಭಾಗಿತ್ವ ಮತ್ತು ಸಂಘಟನೆಯ ರೂಪುರೇಷೆಗಳ ಬಗೆಗೆ ಮಾಹಿತಿಯನ್ನು ನೀಡಿದರು.
* ವಿಕಿಪೀಡಿಯ ಶಿಕ್ಷಣದ ಭಾಗವಾಗಿ ನಮ್ಮ ಪಾತ್ರದ ಕುರಿತು ತಿಳಿಸಿದರು.


ಸಂಪನ್ಮೂಲ ವ್ಯಕ್ತಿಗಳು
* ರೋಹಿಣಿ.
* ಪವನ್ ಸಂತೋಷ್.
* ಸಂದೀಪ್ ಗೀಲ್.
* ಕೃಷ್ಣ ಚೈತನ್ಯ.
* ಶೈಲೆಶ್ ಪಟ್ನಾಯಕ್.
* ಮನ್ಪ್ರೀತ್ ಕೌರ್.
* ಗೋಪಾಲಕೃಷ್ಣ.
* ತನ್ವಿರ್ ಹಸನ್.ಮಂಗಳವಾರ, ಅಕ್ಟೋಬರ್ 24, 2017

ತುಳು ವಿಕಿಪೀಡಿಯಕ್ಕೆ ವರ್ಷದ ಸಂಬ್ರಮ.
  ತುಳು ಭಾಷೆಯಲ್ಲಿ ವಿಶ್ವಕೋಶ ಅಥವಾ ವಿಶ್ವಕೋಶ ಶೈಲಿಯ ಪುಸ್ತಕವನ್ನು ತಯಾರಿಸಿ ಮುದ್ರಸಿ ಹಂಚಿದರು, ಅವು ಎಲ್ಲರಿಗೂ ಎಲ್ಲ ಕಾಲಕ್ಕೂ ಲಭ್ಯವಾಗುವುದಿಲ್ಲ. ಮಾತ್ರವಲ್ಲ  ಈಗೀನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಇರುವಾಗ ನಾವುಗಳಿಗೆ ಮಾಹಿತಿಯು ಬೆರಳ ತುದಿಯಲ್ಲಿ ಇರಬೇಕೆಂದು ಅನ್‍ಲೈನ್‍ನಲ್ಲಿ ಹುಡುಕಾಡುತ್ತೆವೆ. ಸವರುವ, ಹುಡುಕುವ  ಮಂದಿ ಇಂದು ಜಾಸ್ತಿ ಇರುವ ಸಂದರ್ಭದಲ್ಲಿ, ಸಾಕ್ಷಿ ಎಂಬಂತೆ ಯುವ ಜನಾಂಗ ಅದೆ ಹಾದಿಯಲ್ಲಿ ಮುನ್ನಡೆಯುತ್ತಿದೆ. ಹಾಗಿರುವಾಗ ಅಂತರ್‍ಜಾಲದಲ್ಲಿ ತುಳು ವಿಶ್ವಕೋಶ ತಯಾರಿಸುವುದು ಅಗತ್ಯವಾಗಿದೆ.
    ಅಂತರಜಾಲದಲ್ಲಿ ಎಲ್ಲ ಕಾಲಕ್ಕೂ ಎಲ್ಲರಿಗೂ ಲಭ್ಯವಿರುವ ಮಾತ್ರವಲ್ಲ ಎಲ್ಲರೂ ಯಾವುದೇ ನೀರ್ಬಂಧವಿಲ್ಲದೆ ಸಂಪಾದಿಸಬಹುದು ಸ್ವತಂತ್ರ ವಿಶ್ವಕೋಶ ವಿಕಿಪೀಡಿಯ. ಜಗತ್ತಿನ 288 ಭಾಷೆಗಳಲ್ಲಿರುವ ವಿಕಿಪೀಡಿಯ. ಇನ್ನೂ ಸುಮಾರು 250 ಭಾಷೆಯ ವಿಕಿಪೀಡಿಯಗಳು ತಯಾರಿ ಹಂತದಲ್ಲಿವೆ. ತುಳು ವಿಕಿಪೀಡಿಯದ ಕೆಲಸ 2001ರಲ್ಲಿ ಪ್ರಾರಂಭವಾಯಿತು.
    ತುಳು ವಿಕಿಪೀಡಿಯ ಲೈವ್ ಆಗಿ ಅಗಸ್ಟ್ 6ಕ್ಕೆ ಒಂದು ವರ್ಷದ ಸಂಬ್ರಮ. ತುಳು ಭಾಷೆ, ಸಂಸ್ಕøತಿಗೆ ಸಂಬಂಧಿಸಿದ ಮಾಹಿತಿ ಸಹಿತ, ಪ್ರಾಂಪಂಚಿಕ ಜ್ಞಾನ ತುಳುವಿನಲ್ಲಿ ಲಭ್ಯವಾಗಬೇಕು ಎಂಬ ಉದ್ಧೇಶದ ಮೂಲಕ ಆರಂಭಗೊಂಡದ್ದು ತುಳು ವಿಕಿಪೀಡಿಯ. ತುಳು ವಿಕಿಪೀಡಿಯದ ಅದಿಕೃತ ಕೆಲಸ 2007ರಲ್ಲಿ ಆರಂಭಗೊಂಡು 2017ಕ್ಕೆ ಜೀವಂತವಾಯಿತು. ತುಳು ವಿಕಿಪೀಡಿಯ ಭಾರತದ 23ನೇ ಭಾಷೆಯಗಿದೆ. ತುಳು ವಿಕಿಪೀಡಿಯ ಜಾಗತೀಕ ಭಾಷೆಯಾಗಿ ಗುರುತಿಸಿಕೊಂಡಿದೆ. ಕಳೆದ ವರ್ಷ ಅಗಸ್ಟ್ ತಿಂಗಳಿನಲ್ಲಿ  ಚಂಡಿಗಡ್‍ನ  ವಿಕಿಕಾನ್ಪರೇಸ್ಸ್‍ನಲ್ಲಿ  ವಿಕಿಪೀಡಿಯ ಪೌಂಡೇಶನ್‍ನ ಡೈರೆಕ್ಟರ್ ಕ್ಯಾಥರೀನಾ ಮಹೆರ್ರವರು ತಮ್ಮ ಭಾಷಣದಲ್ಲಿ ತುಳು ವಿಕಿಪೀಡಿಯವನ್ನು ಅಧಿಕೃತವಾಗಿ ಘೋಷಿಸಿದರು.
    ತುಳು ವಿಕಿಪೀಡಿಯದ ಕುರಿತು ಅನೇಕ ಕಾರ್ಯಗಾರಗಳನ್ನು ಮಂಗಳೂರು, ಉಡುಪಿ, ಕಾಸರಗೋಡು ಜಿಲ್ಲೆಯ ಹಲವು ಕಡೆಗಳಲ್ಲಿ ನಡೆಸಲಾಗಿದೆ, ಕೆಲವು ಕಾಲೇಜುಗಳಲ್ಲಿ ಶಿಕ್ಷಣ ಯೋಜನೆಯ ಭಾಗವಾಗಿ ವಿಕಿಪೀಡಿಯ ನಡೆಯುತ್ತಿದೆ.  ಈಗ 845 ಉತ್ತಮ ಲೇಖನಗಳು ಇವೆ. ಸುಮಾರು 2315 ಸಾವಿರ ಲೇಖನಗಳು ಕೆಲವು ತಾಂತ್ರಿಕ ತೊಂದರೆಯಿಂದ ಕೂಡಿದೆ. ಅಷ್ಟು ಮಾತ್ರವಲ್ಲ ಸಂಪಾದಕರು ಕೂಡ ಸಾಕಷ್ಟು ಹೆಚ್ಚಾಗಿದ್ದಾರೆ. 25 ಮಂದಿ ಸಕ್ರಿಯ ಸಂಪಾದಕರು ಇದ್ದಾರೆ.
     ಶಾಲೆಗಳಲ್ಲಿ ತುಳು ಕಲಿಯುವವರಿಗೆ ಅಗತ್ಯವಾದ ಅಧ್ಯಯನ ಸಾಮಾಗ್ರಿಯನ್ನು ತಯಾರಿಸುತ್ತಿದ್ದೇವೆ. ತುಳುವನ್ನು ಕಲಿಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಲೇಖನವನ್ನು ತಯಾರಿಸುತ್ತಿದ್ದೇವೆ, ತುಳು ಸಂಸ್ಕøತಿಯ ಬಗ್ಗೆ ತಿಳಿಯುವ  ಅಸಕ್ತರಿಗೆ ತುಳುವಿನಲ್ಲಿ ಮಾಹಿತಿ ಲಭ್ಯ.. ತುಳು ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ. ಸಾಹಿತ್ಯ, ಆಹಾರ, ಸಂಸ್ಕøತಿಗೆ ಸಂಬಂಧಿಸಿದ ಲೇಖನಗಳು ಸಹ ಇವೆ. ತುಳುವಿನಲ್ಲಿ ವಿಜ್ಞಾನದ ಲೇಖನಗಳು ಈಗ ಲಭ್ಯವಿದೆ.
  ವಿಕಿಪೀಡಿಯದಲ್ಲಿ ಬರೆಯುವುದರಿಂದ ಯಾವುದೇ ಆರ್ಥಿಕ ಲಾಭವಿಲ್ಲ. ಲೇಖಕರ ಹೆಸರನ್ನೂ ಲೇಖನದ ಕೆಳಗೆ ಬರೆಯುವ ಪರಿಪಾಠವಿಲ್ಲ. ವಿಕಿಪೀಡಿಯದಲ್ಲಿ ಬರೆಯುವುದೆಂದರೆ ನಿಜವಾದ ಸ್ವಾರ್ಥರಹಿತ ಸಮಾಜ ಸೇವೆ. ನಮ್ಮ ಭಾಷೆಯ ಉಳಿವಿಗೆ ಇದು ಅತೀ ಅಗತ್ಯ.
ತುಳು ವಿಕಿಪೀಡಿಯದಲ್ಲಿ ಹಲವು ಸಾಧ್ಯತೆಗಳು ಇವೆ.
    ವಿಕಿಕ್ಷನರಿ, ವಿಕಿ ಕಾಮಸ್ಸ್, ವಿಕಿಸೋರ್ಸ್, ಮೇಟಾ ವಿಕಿ, ವಿಕಿ ಬುಕ್ಸ್, ವಿಕಿ ಡೇಟಾ, ವಿಕಿ ಕೋಟ್,ವಿಕಿ ನ್ಯೂಸ್ ಇತ್ಯಾದಿ ಯೋಜನೆಗಳಿಂದ ಸಾಕಷ್ಟು ಅಭಿವೃದ್ಧಿ ಪಡಿಸಬಹುದು.
ವಿಕಿಕ್ಷನರಿ:
 ತುಳು ಶಬ್ದಕೋಶ(ಡಿಕ್ಷನರಿ) ಇದರಲ್ಲಿ ವ್ಯಾಕರಣದ ಅರ್ಥ ವ್ಯಾಖ್ಯಾನವನ್ನು ಪಡೆದುಕೊಳ್ಳುತ್ತದೆ. ಒಂದು ಪದದ ಹಲವು ಅರ್ಥ ಛಾಯೆ ಇದರಲ್ಲಿ ಒಳಗೊಂಡಿರುತ್ತದೆ (ಸದ್ಯಕ್ಕೆ ಇದು ಲಭ್ಯವಿಲ್ಲ) ನಮ್ಮ ಮುಂದಿನ ಯೋಜನೆ ಇದಾಗಿದೆ..
ವಿಕಿ ಕಾಮನ್ಸ್:
  ಕಾಮಸ್ಸ್‍ನಲ್ಲಿ ಛಾಯಚಿತ್ರಗಳನ್ನು ಹಾಕುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಈಗಾಗಲೇ ಸಾಕಷ್ಟು ತುಳುನಾಡಿನ ಆಚರಣೆ, ಆರಾಧನೆಗೆ, ಆಹಾರಕ್ಕೆ  ಸಂಬಂಧಿಸಿದ  ಛಾಯಚಿತ್ರಗಳ ಇದರಲ್ಲಿ ಇದೆ. ಯಾರು ಬೇಕಾದರೂ ಉತ್ತಮ ಛಾಯಚಿತ್ರಗಳನ್ನು ಡೌನ್‍ಲೋಡ್ ಮಾಡಬಹುದು.
ಮೇಟಾ ವಿಕಿ:
   ಇದರಲ್ಲಿ ಕರಾವಳಿಯ ಸಂಪಾದಕರ ಅಧಿಕೃತ ಗುಂಪು ಇದರಲ್ಲಿ ಇದೆ. ಈ ಗುಂಪು ತಿತಿಜಿನಿಂದ ಮಾನ್ಯತೆಯನ್ನು ಪಡೆದಿದೆ, ಮಾತ್ರವಲ್ಲದೆ ಭಾರತದ ಸಂವಿಧಾನ ಬದ್ದ ಸಂಘವಾಗಿದೆ.

ವಿಕಿ ಬುಕ್ಸ್:
ತುಳುವಿನಲ್ಲಿ ಪ್ರಕಟಗೊಂಡ ಪುಸ್ತಕಗಳನ್ನು ಇದರಲ್ಲಿ ಹಾಕಬಹುದು. ತುಳುವಿನಲ್ಲಿ ಪ್ರಕಟಗೊಂಡ ಪುಸ್ತಕವನ್ನು ಉಚಿತವಾಗಿ ಯಾರು ಬೇಕಾದರು ಉಪಯೋಗಿಸಿಕೊಳ್ಳಬಹುದು. ಮುಂದಿನ ಕಾರ್ಯಯೋಜನೆ(ಸದ್ಯಕ್ಕೆ ಇದು ಲಭ್ಯವಿಲ್ಲ).
 ವಿಕಿ ಡೇಟಾ:
ವಿಕಿಪೀಡಿಯದಲ್ಲಿ ಇರುವ ಸರಳವಾಗಿ ಅಧಿಕೃತವಾಗಿ ಸಂಕ್ಷೀಪ್ತ ಮಾಹಿತಿ ಇದರಲ್ಲಿ ಇದೆ. ವಿಕಿ ಡೇಟಾದಲ್ಲಿರುವ  ಯಾವುದೆ ಭಾಷೆಯ ವಿಕಿಪೀಡಿಯದ ಮಾಹಿತಿಯನ್ನು ಒಳಗೊಳಂಡಿರುತ್ತದೆ.(ಕೆಲವು ಲೇಖನಗಳಲ್ಲಿ ಲಭ್ಯ.)
 ವಿಕಿ ಕೋಟ್:
ಈ ಯೋಜನೆಯಲ್ಲಿ ಗಾದೆ ಮಾತುಗಳು, ತುಳು ಕಬಿತಗಳನ್ನು, ಸಂದಿ, ಪಾಡ್ದನಗಳನ್ನು, ಇತ್ಯಾದಿಗಳನ್ನು ಹಾಕಬಹುದು. ಮುಂದಿನ ಕಾರ್ಯಯೋಜನೆ(ಸದ್ಯಕ್ಕೆ ಇದು ಲಭ್ಯವಿಲ್ಲ).
ತುಳುವರು ಏನು ಮಾಡಬೇಕು?. 
   ತುಳು ಸಂಸ್ಕøತಿಯನ್ನು ವಿಶ್ವಕ್ಕೆ ಪರಿಚಯಿಸುವ ದೃಷ್ಠಿಯಿಂದ ವಿಕಿಪೀಡಿಯದಲ್ಲಿ ನಮ್ಮ ನಾಡಿನ ವಿಶಿಷ್ಟತೆಯನ್ನು ನಾವು ತಿಳಿಸಬೇಕು.ಅಂದರೆ ಮಾಹಿತಿಯನ್ನು ಪ್ರತಿಯೊಂದು ಭೌತಿಕ ಅಕರಗಳ ಬಗ್ಗೆ ಮಾಹಿತಿಯನ್ನು ಹಾಕಬೇಕು. ಅಟಿಡೊಂಜಿ ದಿನ, ಅಟಿಡೊಂಜಿ ಕೂಟೊ, ಅಟಿ ತಮ್ಮನ,  ಇತ್ಯಾದಿ ಆಡಂಬರಗಳನ್ನು ನಿಲ್ಲಿಸಿ, ತುಳು ಸಂಸ್ಕøತಿಯನ್ನು ಇಡಿ ಪ್ರಪಂಚಕ್ಕೆ ತಿಳಿಸುವ ಕೆಲಸವನ್ನು ನಾವು ಮಾಡಬೇಕು. ಅಟಿಡೊಂಜಿ ದಿನವನ್ನು ಒಂದು ದಿನ ಆಚರಿಸುವುದರಿಂದ ಸ್ಥಳಿಯ ಪತ್ರಿಕೆಯಲ್ಲಿ ವರದಿಗಳು ಬರಬಹುದು. ಜಾಗತೀಕವಾಗಿ ನಮ್ಮ ಸಂಸ್ಕøತಿಯನ್ನು ತೆರೆದಿಡುವುದು ಹೇಗೆ?. ತುಳು ಭಾಷೆಯನ್ನು ಬೆಳೆಸುವುದು ಹೇಗೆ?. ತುಳು 8 ಪರೀಚ್ಛೇದಕ್ಕೆ ಸೇರಬೇಕು ಎನ್ನುವ ಕೂಗು ಜಿಲ್ಲೆಯಿಂದ ಹೊರಗೆ ಕೇಳಿಸುತ್ತಿದೆಯಾ?. ಪರೀಚ್ಛೇಧದ ಮಾತು ರಾಜಕೀಯ ಪ್ರೇರಿತವಾದದು. ತುಳುವಿಗೆ ನಾವೇನು ಮಾಡಬಹುದು?. ಎನ್ನುವುದನ್ನು ಯೋಚಿಸಿದ್ದಿರಾ?. ಇತ್ಯಾದಿ ಪ್ರಶ್ನೆಗಳನ್ನು ಕೇಳಿಕೊಂಡಾಗ ಉತ್ತರವಿದೆಯಾ?. ಜಾಗತೀಕವಾಗಿ ತುಳು ಬೆಳೆಯುತ್ತಿದೆ.
       ತುಳು ಬೆಳೆಸುವ ಮೂಲಕ ತುಳು ಸಂಸ್ಕøತಿಯನ್ನು ಉಳಿಸಿ. ಅಳಿಯುವ ಅಂಚಿಗೆ ಸರಿಯುವ ಮುನ್ನ ನಮ್ಮ ಆರಾಧನೆ ,ಆಚರಣೆಗಳನ್ನು  ಕುರಿತು ಮಾಹಿತಿ ಲಭ್ಯವಾಗಬೇಕು ಎನ್ನುವ ಕಾಳಜಿ ನಮ್ಮಲ್ಲಿ ಇರಬೇಕು. ಆದರೆ ಸುಳ್ಯದ ಬಗ್ಗೆ ಮಾಹಿತಿ ಮಾತ್ರ ಕಡಿಮೆ ಇದೆ. ಇದನ್ನು ತುಂಬಿಸುವ ಕೆಲಸ ನಡೆಯಬೇಕು. ತುಳು ವಿಕಿಪೀಡಿಯದ ವಿಳಾಸ-  ಣಛಿಥಿ.ತಿiಞiಠಿeಜiಚಿ.oಡಿg. ಇಲ್ಲಿಗೆ ಭೇಟಿ ನೀಡಿ ಖಾತೆ ತೆರೆದು, ಸಂಪಾದಿಸಲು ಪ್ರಾರಂಭಿಸಿ. ನೆನೆಪಿಡಿ ಇದು ಒಂದು ವಿಶ್ವಕೋಶ. ವಿಶ್ವಕೋಶ ಶೈಲಿಯ ಮಾಹಿತಿ ಅಗತ್ಯವಿದೆ. ಯಾವುದೇ ವೈಯಕ್ತಿಕ ಅಭಿಪ್ರಾಯ, ಬ್ಲಾಗ್ ಮಾದರಿಯ ಲೇಖನಗಳನ್ನು, ಕಥೆ, ಕವನ, ಕಾದಂಬರಿ, ನಾಟಕ ಇತ್ಯಾದಿಗಳಿಗೆ ಅವಕಾಶವಿಲ್ಲ. ಇಂದು ಲೇಖನವನ್ನು ಪ್ರಾರಂಭಿಸಿವ ಮುನ್ನ ಅದೇ ಶೀರ್ಷಿಕೆಯನ್ನು ಅಥವಾ ಬೇರೆ ಯಾವುದೆ ವಿಷಯದಲ್ಲಿ ಅದೇ ಶೀರ್ಷಿಕೆ ಇದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ತುಳು ವಿಕಿಪೀಡಿಯವನ್ನು ಬೆಳೆಸಿ. ತುಳು ಭಾಷೆ ಉಳಿಸಿ, ಬೆಳೆಸಿ.

ಭಾನುವಾರ, ಜೂನ್ 25, 2017

ಗೌಡ ಜನಾಂಗದ ಸಾಂಸ್ಕೃತಿಕ ಪಲ್ಲಟಗಳು


      ಜಾತಿ ಆಧಾರಿತ ಸಂರಚನೆಗಳು ಅಧುನಿಕ ಕಾಲದಲ್ಲಿ ಹೊಸ-ಹೊಸ ಸಂರಚನೆಗಳನ್ನು ಹೊಂದಿದೆ. ನಾವಿಂದು ಪರಿಕಲ್ಪಿಸಿಕೊಳ್ಳುವ ಸಾಂಸ್ಕೃತಿಕ ಸಂಗತಿಗಳು ಕೇವಲ ಪರಂಪರೆಯನ್ನು ಮಾತ್ರ ಪ್ರತಿನಿಧಿಸುತ್ತಿಲ್ಲ. ಅವು ಅಧುನಿಕ ಸಂದರ್ಭದಲ್ಲಿ ಬೇರೆ-ಬೇರೆ ರೀತಿಯಲ್ಲಿ ಪರಿಕಲ್ಪಸಲಾಗುತ್ತಿದೆ. ಅದನ್ನು ಒಂದು ಜನಾಂಗಕ್ಕೆ ಹೇಳುವಾಗ ಅನಗ್ಯತೆಯನ್ನು ಕುರಿತು ವಿಚಾರಮಾಡಲಾಗುತ್ತದೆ. ಆದರೆ ಗೌಡರನ್ನು ಕುರಿತು ಮಾತಾನಾಡುವಾಗ ಕರಾವಳಿಯ ಗೌಡರನ್ನು ಕೇಂದ್ರಿಕರಿಸಿ ಹೇಳುವುದಾದರೆ, ಕರಾವಳಿಯಲ್ಲಿ ವಾಸಿಸುವ ಅರೆಗನ್ನಡ, ತುಳು ಭಾಷೆಯನ್ನು ಮಾತಾನಾಡುವ ಗೌಡರ ಆಚರಣೆಯನ್ನು ಕೇಂದ್ರಕರಿಸಿ ಮಾತಾನಾಡುವುದು ನನ್ನ ಪ್ರಬಂಧದ ಮುಖ್ಯ ಉದ್ಧೇಶ.
ಗೌಡರ ಮೂಲದ ಕುರಿತು ಸಾಕಷ್ಟು ಚರ್ಚೆಗಳನ್ನು ವಿದ್ವಾಂಸರು ನಡೆಸಿದ್ದಾರೆ ಮೂಲದ ಬಗ್ಗೆ ಚರ್ಚೆಯನ್ನು  ಮಾಡಿದ್ದಾರೆ.  ನಾನು ಮೂಲ ಉದ್ದೇಶಗಳನ್ನು ಕೇಂದ್ರಿಕರಿಸಿದ್ದೇನೆ.
1).ಹೊಸಕ್ಕಿ ಉಟ(ಪುದ್ವಾರ್).
ಗೌಡರ ಆಚರಣೆಗಳಲ್ಲಿ ಹೊಸ್ತು(ಪುದ್ವಾರ್) ಎಂದು ಕರೆಸಿಕೊಳ್ಳುವ ಒಂದು ವಿಶಿಷ್ಟ ಆಚರಣೆಯು ಕಾಣಿಸಿ ಕೊಂಡಿದ್ದರು. ಹಲವಾರು ಸಂಪ್ರದಾಯಿಕ ಆಚರಣೆಗಳು ಇವೆ, ಪ್ರಮುಖ ಆಚರಣೆಯಾಗಿದೆ. ಈ ಆಚರಣೆಗಳಲ್ಲಿ ಅನೇಕ ಸ್ಥಿಂತ್ಯಂತರಗಳು ಕಾಣಿಸಿಕೊಂಡಿದೆ.
2). ಕದಿರು ಕಟ್ಟುವುದು.
ಕದಿರು ಕಟ್ಟುವ ಆಚರಣೆಯು ಇಂದು ವಿನಾಶ ಹೊಂದುವ ಸ್ಥಿತಿಗೆ ತಲುಪಿದೆ ಇದಕ್ಕೆ ಕಾರಣ ತುಳುನಾಡಿನಲ್ಲಿ  ಗದ್ದೆ ಬೇಸಾಯವನ್ನು ಬಿಟ್ಟಿರುವುದು ಪ್ರಮುಖ ಕಾರಣವಾದರೆ ಇನ್ನೊಂದು ರೀತಿಯಲ್ಲಿ ಲಾಭದಾಯಕತೆಯನ್ನು ಪರಿಗಣಿಸುವುದನ್ನು ಕಾಣಬಹುದು.
ಕದಿರನ್ನು ಹಿಂದೆ ಗೌಡರು ತನ್ನ ತರವಾಡು ಮನೆ ಅಥವಾ ಐನ್ ಮನೆ (ಮೂಲಮನೆ)ಯಲ್ಲಿ ಕಟ್ಟುವುದು ಕ್ರಮವಾಗಿತ್ತು. ಪಕ್ಕದ ಕುಟುಂಬದ ಮೂಲಕ ಪಡೆದುಕೊಳ್ಳುತ್ತಿದ್ದರು. ಬೇರೆ ಕಡೆಗಳಿಂದ ತರುತ್ತಿದ್ದ ಕ್ರಮ ಇರಲಿಲ್ಲ. ಆದರೆ ಇಂದಿನ ದಿನಗಳಲ್ಲಿ ಮೊದಲು ದೇವಸ್ಥಾನಗಳಿಂದ ಕದಿರು ತಂದು ಮನೆಯಲ್ಲಿ ಕಟ್ಟುವ ಕ್ರಮಗಳನ್ನು ಅನುಸರಿಸುತ್ತಿದ್ದಾರೆ.
ಇಂದಿನ ಯುವ ಪೀಳಿಗೆಗೆ ಕದಿರು ಕಟ್ಟುವುದಕ್ಕೆ ಬೇಕಾದ ಸಾಮಾಗ್ರಿಗಳನ್ನೆ ಮರೆಯುತ್ತಿದ್ದಾರೆ, ಬಹುಷಃ ನಮಗೆ ಅಶ್ಚರ್ಯವಾಗಹುದು.
2). ಹೊಸಕ್ಕಿ ಊಟ.
ಹೊಸಕ್ಕಿ ಊಟದ ಆಚರಣೆ ಎಲ್ಲಾ ಸಮುದಾಯಗಳಲ್ಲಿ ಬಿನ್ನ ಬಿನ್ನವಾಗಿ ಆಚರಿಸಲ್ಪಡುತ್ತದೆ. ಆದರೆ ಗೌಡರೆ ತನ್ನ ಅನನ್ಯತೆಯನ್ನು ಕಾಯ್ಧುಕೊಂಡಿದ್ದಾರೆ. ಕುಟುಂಬದ ಹಿರಿಯರಿಗೆ ಗೌರವವನ್ನು ನೀಡುವ ಒಂದು ಪದ್ಧತಿ ಇದೆ. ಅಂದರೆ ಆತನ\ಕೆ ಇಲ್ಲಿ ಮಾರ್ಗದರ್ಶನಕರಾಗಿ ಇರುತ್ತಾರೆ.ಹೊಸಕ್ಕಿಯನ್ನು ತಯಾರಿಸುವ ಕ್ರಮದಿಂದ ಹಿಡಿದು ಉಳಿದ ಕ್ರಮಗಳ ವರೆಗೆ ಸೇರಿರುತ್ತದೆ. ಮನೆಯ ಹಿರಿಯ ವ್ಯಕ್ತಿಗಳು ಯಜಮಾನನ  ಒಪ್ಪಿಗೆ ಪಡೆದು ಅಕ್ಕಿ ಹಾಕುವ ಕ್ರಮ, ಹಿರಿಯರಿಗೆ ಬಳಿಸುವ(ಮೀಸಲು ಇಡುವ)ಕ್ರಮ, ವೈವಿದ್ಯಮಯ ಆಡುಗೆಗಳನ್ನು ತಯಾರಿಸುವುದನ್ನು ಸೇರಿಸಿಕೊಂಡು ನೋಡುವುದಾದರೆ ಹಿರಿಯವನ ಸ್ಥಾನವನ್ನು ಕಿರಿಯವರು ಅತಿಕ್ರಮಣ ಮಾಡಿಕೊಂಡು ನಡೆಸುವ ಕ್ರಮಗಳು ಎಷ್ಟು ಸರಿ?.  ಅವರ ಅನುಭವಕ್ಕೆ ಬೆಲೆ ಇಲ್ಲವೆ?,ಸ್ಥಿತ್ಯಂತರಕ್ಕೆ ಕಾರಣಗಳು ಏನು? ಇವುಗಳಿಗೆ ಉತ್ತರ ಕಂಡುಕೊಂಡರೆ ವಾಸ್ತವದಲ್ಲಿ ಅನೇಕ ತಪ್ಪುಗಳ ಅರಿವಾಗಬಹುದು.
ಊಟದ ಕ್ರಮದಲ್ಲಿ ಆದ ಬದಲಾವಣೆಗಳು.
ಊಟದ ಕ್ರಮದಲ್ಲಿ ಮನೆಯ ಹಿರಿಯರು ಮತ್ತು ನೆಂಟರಿಗೆ ಊಟಮಾಡಲು ಕೈ ತೋಳೆಯಲು ನೀರುಕೊಟ್ಟು ಊಟಕ್ಕೆ ಆಹ್ವಾನ ನೀಡುವ ಕ್ರಮ ಹಿಂದೆ ಇತ್ತು ಇಂದು ಅಂಂತಹ ಕ್ರಮಗಳನ್ನು ಕೈಬಿಡಲಾಗಿದೆ, ಅಧುನಿಕತೆಯ ಬಿಕ್ಷೆ ಪಾತ್ರೆಯ ವ್ಯವಸ್ಥೆ(ಬಪೆ ವ್ಯವಸ್ಥೆ)
ಮುದುವೆಯಾಗಿ 1 ವರ್ಷವಾಗದ ಹುಡುಗ-ಹುಡುಗಿ ಎಲ್ಲಿ ಇದ್ದರು ಹೊಸಕ್ಕಿ ಉಟಕ್ಕೆ ತೇರಳುವುದು ಕ್ರಮ, ಆದರೆ ಅಧುನಿಕ ಭರಾಟೆಯಿಂದ  ಇಂತಹ ಕಾರ್ಯಕ್ರಮ ಕ್ಕೆ ಹೋಗುವುದು ಕಡಿಮೆಯಾಗಿದೆ.
ಇನ್ನೂ 1 ವರ್ಷವಾಗದ ಮಗುವನ್ನು ಹೊಸಕ್ಕಿ ಉಟಕ್ಕೆ ಕರೆದುಕೊಂಡು ಹೋಗಿ, ಮಗುವಿಗೆ ಅಂದಿನಿಂದ ಆನ್ನ ನೀಡುವ ವ್ಯವಸ್ಥೆ ಆರಂಭಗೊಳ್ಳುತ್ತದೆ. ಅದು ತನ್ನತರವಾಡು, ಐನ್ ಮನೆಗಳಲ್ಲಿ ನಡೆಯಿತ್ತಿತ್ತು. ಆದರೆ ಇಂದು ವೈದೀಕ ಸಂಸ್ಕøತಿಯ ಪ್ರವೇಶದಿಂದ ತರವಾಡು ಮನೆ, ಐನ್ ಮನೆಗಳನ್ನು ವಿಟ್ಟು ದೇವಸ್ಥಾನಗಳಿಗೆ ಪಲ್ಲಟಗೋಂಡಿರುವುದನ್ನು ಆರಸಿ ಹೊಸದಾದ ನಮ್ಮದಲ್ಲದ ಕ್ರಮಗಳುಗೆ ಒಗ್ಗುಕೊಂಡಿರುವುದು ವಿಪರ್ಯಾಸ.
2). ವಾರ್ಷಿಕ ಉತ್ಸವಗಳು ಮತ್ತು ಪ್ರತಿಷ್ಠಾ ಮಹೋತ್ಸವಗಳು.
ನಾವು ಆಚರಿಸುವ ಅನೇಕ ದೈವಗಳಿಗೆ ಇಂದು ನಡೆಯುವ ವೈದಿಕ ಸಂಪ್ರದಾಯದ ಸೇವೇಗಳು ಸಾಂಸ್ಕøತಿಕ ರಾಜಕಾರಣದ ಭಾಗವಾಗಿ ಕಾಣಿಸಿಕೋಳ್ಳುತ್ತವೆ. ತರವಾಡು, ಐನ್ ಮನೆಗಳಿಗೆ  ಇಂದು ಅಷ್ಠಬಂಧ ಬ್ರಹ್ಮಕಲಶ ಸೇವೆಗಳು ನಡೆಯುವುದನ್ನು  ನೋಡಿದರೆ ಗೌಡರಿಗೆ ಬ್ರಾಹ್ಮಣರಿಲ್ಲದೆ ಇಂದು ಯಾವ ಆಚರಣೆಗಳು ನಡೆಯುವುದಿಲ್ಲ. ಎನ್ನುವ ಸ್ಥಿತಿಗೆ ತಲುಪಿದ್ದಾರೆ.ತಂತ್ರಿ ಎನ್ನುವ ಕುತಂತ್ರಕ್ಕೆಬಲಿಯಾಗುತ್ತಿದ್ದಾರೆ.ಆತ ವಿಧಿಸುವ ಕಟ್ಟಳೆಗಳು ಬಹುತೇಕ ಇಂದು ವೈದೀಕ ಧರ್ಮದ ಶಾಸ್ತ್ರಗಳಿಗೆ ಸಂಬಂಧಿಸಿದ್ದು  ಆದರೆ ಗೌಡರ ಆಚರಣೆಗಳಲ್ಲಿ ಕಂಡು ಆಹಾರ ಕ್ರಮ ಮತ್ತು ಜೀವನಕ್ಕೂ ಆಗಾದವಾದ ವ್ಯತ್ಯಾಸ ಕಂಡುಕೋಂಡಿದೆ.
3).ಮದುವೆ ಸಂಧರ್ಭದಲ್ಲಿ ನಡೆಸುವ ಆಚರಣೆಗಳು
ಗೌಡರ ಮದುವೆಗಳಲ್ಲಿ ಊರಗೌಡ,ಸೋದರ ಮಾವ ಇವರ ಪಾತ್ರ ಬಹಳ ಮಹತ್ವವಾದದ್ದು, ಆದರೆ ಆ ಪಾತ್ರಗಳು ನೆಪ ಮಾತ್ರಕ್ಕೆ ಕಾಣಿಸುತ್ತದೆ.ಇದಕ್ಕೆ ಪ್ರಮುಖ ಕಾರಣ ಬ್ರಾಹ್ಮಣರ ಪ್ರವೇಶ ಬಲವಾದ ಪುಷ್ಠಿಯನ್ನು ನೀಡುತ್ತದೆ.
ಮದುರಂಗಿಶಾಸ್ತ್ರ ಮತ್ತು ಸತ್ಯನಾರಾಯಣ ಪೂಜೆ.
ಮದುರಂಗಿಶಾಸ್ತ್ರಕ್ಕೆ ವಿಶೇಷ ಮಹತ್ವ ಗೌಡರಲ್ಲಿ ಇದೆ. ಆದರೆ ನಮ್ಮದಲ್ಲದ ಸತ್ಯನಾರಾಯಣ ಪೂಜೆ ಯಾಕೆ?. ಎಣ್ಣೆಅರಸಿಣ ಕಾರ್ಯಕ್ರಮಕ್ಕೆ ಮೊದಲು ಇಮದು ನಡೆಸಲಾಗುತ್ತದೆ. ಗೌಡರಲ್ಲಿ ಸತ್ಯನಾರಾಯಣ ಫೂಜೆಯ ಪರಿಕಲ್ಪನೆಯೆ ಇಲ್ಲ?.ಗುರು ಕಾರ್ನೂರುವುಗೆ ಬಳಸುವ ಕ್ರಮವಿದೆ.(ಅಗೆಲು ಕ್ರಮ)
ಮದುವೆ ಮತ್ತು ಯಜ್ಞಕುಂಡ.
ಮುದುವೆಯಲ್ಲಿ ಕಂಡುಬರುವ ಹೋಮ ಹವನಗಳು, ಇಂದು ನಮ್ಮದು ಎಂದು ಹೇಳುವ ಅನೇಕ ಮಂದಿಯನ್ನು ನಾವು ಕಾಣಬಹುದು. ಆದರೆ ಊರುಗೌಡ, ಸೋದರ ಮಾವ  ಸಂಸ್ಕøತಿಯನ್ನು ಇಂದು ಕಲ್ಯಾಣಮಂಟಪಗಳಲ್ಲಿ ಪ್ರತಿಷ್ಠಾಪಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗೌಡರ ದಾರೆ ಎರೆಯುವ ಕ್ರಮಗಳೆ ಬಿನ್ನವಾಗಿದೆ, ಬ್ರಾಹ್ಮಣರ ವಿವಿಧ ನಮೂನೆಯ ಧಾರೆಗಳು ಇಂದು ಎರೆಯಲಾಗುತ್ತದೆ. ಗೌಡರ ಮೂಲಕ್ರಮದಮತೆ ಎರೆಯಲಾಗುತ್ತದಾ?. ಎಂದು ಕೇಳಿದರೆ ಉತ್ತರವನ್ನು ನೀಡುವುದು ಸ್ವಲ್ಪ ಕಷ್ಟವಾಗುತ್ತದೆ.
4). ಗೃಹ ಪ್ರವೇಶ.
ಗೌಡರ ಭಾಷೆಯಲ್ಲಿ ಹೇಳುವಂತೆ ಗೃಹಪ್ರವೇಶವನ್ನು ಹೀಗೆ ಕೆರಯುತ್ತಾರೆ. “ಮನೆ ಒಕ್ಕಲು” ಎಂದು ತುಳುವಿನಲ್ಲಿ “ಇಲ್ಲ್ ಒಕ್ಕೆಲ್” ಎಂದು ಹೇಳುತ್ತಾರೆ.
ಗೌಡರ ಗೃಹಪ್ರವೇಶದಲ್ಲಿ ಆದ ಬದಲಾವಣೆಯನ್ನು ಗಮನಿಸಿದರೆ ಗೌಡರ ಕ್ರಮದಲ್ಲಿ ವೈದೀಕ ಹಸ್ತಕ್ಷೇಪವನ್ನು ನಾವು ಕಾಣಬಹುದು.
ಕುಟ್ಟಿ ಪೂಜೆಯ ನಂತರ ನಡೆಯುವ ವಾಸ್ತು ಪೂಜೆ.ಕುಟ್ಟಿಪೂಜೆಯಲ್ಲಿ ಅಲ್ಪಸ್ವಲ್ಪ ಪಲ್ಲಟಗಳು ನಡೆದಿದೆ.ಆದರೆ ನಮ್ಮ ಸಂಸ್ಕøತಿಯಲ್ಲದ ವಾಸ್ತುಹೋಮಗಳು ವೈದೀಕತೆಯನ್ನು ನೇರವಾಗಿ ಹೇರುವ ಅಥವಾ ಅದರ ಪ್ರಭಾವಕ್ಕೆ ಒಳಗಾಗಿರುವುದನ್ನು ನಾವು ಇಂದು ಗುರುತಿಸಬಹುದು.
ಗೃಹಪ್ರವೇಶದಲ್ಲಿ ಕಂಡು ಬರುವ ವಿಚಾರಗಳನ್ನು ಗಮನಿಸುವುದಾದರೆ ಗೃಹಪ್ರವೇಶದ ಸಂದರ್ಭದಲ್ಲಿ ಮನೆ ತುಂಬಿಸುವ ಕ್ರಮ ಪ್ರಮುಖ ಪಾತ್ರವಹಿಸಿತ್ತು.ಆದರೆ  ಮನೆ ತುಂಬಿಸುವುದರಲ್ಲಿ ಸಹ ವೈದೀಕರ ಹಸ್ತಕ್ಷೇಪವನ್ನು ನಾವು ಕಾಣಬಹುದು. ಮನೆ ಯಜಮಾನ ಮನೆಯನ್ನು ಪ್ರವೇಶ ನಡೆಸುವ ಸಂದರ್ಭದಲ್ಲಿ ರಾಜಾಕಾರಣಿಗಳು ನಡೆಸುವ ಪರದೆ ಸರಿಸುವ (ಸ್ಕ್ರೀನ್) ಮೂಲಕ ಪ್ರವೇಶ ನಡೆಯುತ್ತಿದೆ.ಇದು ಯಾವ ಕ್ರಮ?. ಎಂದು ಆಶ್ಚರ್ಯವನ್ನು ತರುತ್ತದೆ. ಈ ರೀತಿಯ ಕ್ರಮ ಎಲ್ಲಿಂದ ಬಂತು ಎಂದುನೋಡಿದರೆ ಇದು ಎಲ್ಲಿಂದ ಬಂತು ಎಂಬುದು ತಿಳಿಯುತ್ತದೆ.
ಇಂದು ನಡೆಯುವ ಸತ್ಯನಾರಯಣ ಪೂಜೆ ಎಂಬ ಪರಮಪಾವಿತ್ರ್ಯತಾ ಪೂಜೆಗಳನ್ನು ನಡೆಸಲಾಗುತ್ತದೆ.ಇದರಿಂದ ಆಗುವ ಲಾಭಗಳೇನು?. ಯಾರ ಉದ್ದಾರವಾಗುತ್ತದೆ?. ಇತ್ಯಾದಿ ಪ್ರಶ್ನೆಗಳನ್ನು ಹಾಕಿಕೊಂಡು ಯೋಚಿಸಿದರೆ ಅನೇಕ ಸತ್ಯಗಳು ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಇಂದು ಆ ಪಲ್ಲಟಗಳನ್ನು ಒಪ್ಪುವ ಮನಸ್ಥಿತಿಯಲ್ಲಿ ಗೌಡರು ಇದ್ದಾರಾ??. ಎಂದು ಕೇಳಿದರೆ ಖಂಡಿತವಾಗಿಯೂ ಸಾಧ್ಯವಿಲ್ಲ.
6).ವೃತಾಚರಣೆಗಳು.
ಇತ್ತೀಚಿನ ವರ್ಷಗಳಲ್ಲಿ ಕಂಡುಬರುವ ಹೊಸ ಪಲ್ಲಟÀಗಳು ಎಂದು ಹೇಳಬಹುದು. ವಾರದ ಪೂರ್ತೀ ಇಂದು ನಡೆಯುವ ವೃತಗಳು.ಆದರೆ ನಮ್ಮಲ್ಲಿರುವ ಹಾಗೂ ಆರಾಧಿಲ್ಪಡುವ ದೈವ ಮತ್ತು ಪೂಜೆಗಳಿಗೆ ಮುಹೂರ್ತವನ್ನು ನಿಗದಿಪಡಿಸಿದಾಗ ಒಂದು ವಾರ ಕನಿಷ್ಠವಾಗಿ ವೃತಾಚರಣೆ ನಡೆಸಲು ಹೇಣಗಾಡುತ್ತಾರೆ. ಮಾತ್ರವಲ್ಲ ಆದನ್ನು ಗಾಳಿಗೆ ತೂರಿ ಬಿಡಲಾಗುತ್ತದೆ.ಆದರೆ ಗೌಡರ ಮನೆಗಳಲ್ಲಿ ಇಂದು ಆರಂಭವಾಗುವ ಹೊಸ ಹೊಸ ದೇವರುಗಳ ವೃತಗಳನ್ನು ನಾವು ನೋಡಬಹುದು.
ಉದಾ:
ಸೋಮವಾರ: ಶಿವ
ಮಂಗಳವಾರ: ದುರ್ಗೇ
ಬುಧವಾರ :
ಗುರುವಾರ : ರಾಘವೇಂದ್ರ
ಶುಕ್ರವಾರ: ದೇವಿ
ಶನಿವಾರ: ಶನಿ,ಅಯ್ಯಪ್ಪ
ಭನುವಾರ : ಎಲ್ಲಾ ವೃತಗಳಿಗೆ ಎಳ್ಳು ನೀರು.
ಮತ್ತು ಗ್ರಹಣ ಸಂಧರ್ಭದಲ್ಲಿ ನಡೆಸುವ ವೃತವನ್ನು ಸಹ ಗಮನಿಸಿದರೆ ಅನ್ಯ ಸಂಸ್ಕøತಿ ಎಂಬುದು ಎಷ್ಟು ಪ್ರಭಾವ ಬೀರಿದೆ ಎಂಬುದನ್ನು ಗಮನಿಸಬಹುದು. ಈ ಮೇಲಿನ ವೃತಾಚರಣೆಯ ಸಂಧರ್ಭದಲ್ಲಿ ಇಂದು ಮಡಿ ಮೈಲಿಗೆಯನ್ನು ಸಹ ಸೇರಿಸಿಕೊಳ್ಳಲಾಗಿದೆ, ಆದರೆ ಎಲ್ಲಾ ಪಲ್ಲಟಗಳಿಗೆ ಕಾರಣವಾಗಿರುವ ಜೋತ್ಯಿಷ್ಯವು,  ಇಂದು ವೈದೀಕತೆಯನ್ನು ಹೇರುವ ಕೇಂದ್ರವಾಗಿದೆ, ಮಾತ್ರವಲ್ಲ   ಸಂಸ್ಕತಿಯನ್ನು ನಾಶದ ಯಂತ್ರಗಳಾಗಿವೆ ಎಂಬುದರಲ್ಲಿ 2 ಮಾತಿಲ್ಲ. ಇಲ್ಲಿ ಮುಖ್ಯವಾಗಿ ಕಾಣುವ 2 ಸಂಸ್ಕತಿಗಳು ಎದುರು ಬದಿರಾಗಿ ಕಾಣುವ ಸಂದರ್ಭದಲ್ಲಿ ಅನ್ಯ ಮತ್ತು ಸ್ವ ಸಂಸ್ಕತಿಗಳ ಸಂಘರ್ಷದ ನೆಲೆಯನ್ನು ಕಾಣಬಹುದು.ಮಾತ್ರವಲ್ಲ ಅನ್ಯ ಸಂಸ್ಕತಿಯು ಬಹುಸಂಸ್ಕ್ರತಿಯನ್ನು ಸ್ವಾಹ ಮಾಡುವ ಮೂಲಕ ತನ್ನ ನಯ ನಾಜೂಕಿನ ಕೆಲಸವನ್ನು ನಿರ್ವಹಿಸುತ್ತದೆ.
ಅನ್ಯವೆಂಬುದು ನನ್ನದಲ್ಲದ ಮತ್ಯಾರದೊ ಆಚರಣೆಗೆ ಸಂಬಂಧ ಪಟ್ಟದ್ದು ಸ್ವ ಸಂಸ್ಕ್ರತಿಯು ತನ್ನ ನೆಲದ ತಾಯಿಬೇರಿಗೆ ಸಂಬಂಧಪಟ್ಟದ್ದು ಅದನ್ನು ಬಿಟ್ಟು, ಇನ್ಯಾರೊ ಹೇಳಿದ ಆಚರಣೆಯನ್ನು ಮಾಡುವುದು ಎಷ್ಟು ಸರಿ?.
ಆದರೆ ಮೌಡ್ಯ, ಅಂದಶ್ರದ್ಧೆ ಯಾವುದು ಎಂಬುದು ಸ್ಪಷ್ಟವಾದ ಚಿತ್ರಣವಿದ್ದರೆ ಒಳಿತು.
7).ಆಹಾರ ರಾಜಾಕಾರಣ.
ಶೂದ್ರರಾಗಿರತುವ ಗೌಡರು ಮುಖ್ಯವಾಗಿ ಬಳಸುವ ಮಾಂಸ ಆಹಾರವು ಇಂದು ಬದಲಾಗಿದೆ. ಹುಟ್ಟಿನಿಂದ ಹಿಡಿದು ಸಾವಿನವರೆಗೆ ಒಂದಲ್ಲ ಒಂದು ಆಚರಣೆಯಲ್ಲಿ ಮಾಂಸಾಹಾರವನ್ನು ಗೌಡರು ತಲೆತಲಾಂತರದಿಂದ ಬಳಸಿಕೊಂಡು ಬಂದಿದ್ದಾರೆ, ಆದರೆ ಅವು ಇಂದು ಅಧುನಿಕರು ಎನ್ನುವ ಸಂದರ್ಭದಲ್ಲಿ ಕಾಣಿಸಿಕೋಳ್ಳುವ ದ್ವಂದ್ವವನ್ನು ಗಮನಿಸಿದರೆ ಅರ್ಥವಾಗಬಹುದು.
1. ಹಿಂದು ಎನ್ನುವ ನೆಲೆಯಲ್ಲಿ ಪರಿಕಲ್ಪಿಸಿಕೊಳ್ಳುವಾಗ ಕಾಣಿಸಿಕೊಳ್ಳುವ ಅಂಶ.
2.ವೃತಾಚರಣೆಯ ಸಂದರ್ಭದಲ್ಲಿ ಕಾಣಿಸಿಕೋಳ್ಳುವ ಅಂಶ.
ಅಧುನಿಕ ಕಾಲಘಟ್ಟದಲ್ಲಿ ಗೌಡರು ಬೇರೆ ಬೇರೆ ಕಾರಣಗಳಿಗೆ ತಮ್ಮ ಆಹಾರ ಕ್ರಮವನ್ನು ಬದಲಾಯಿಸಿಕೊಂಡಿರಬಹುದು.
ಗೌಡ ಸಂಸ್ಕತಿಯನ್ನು ಮಾತನಾಡುತ್ತಾ ಹೋದರೆ ಅದರೆ ವಿಭಿನ್ನ ವಿಷಯಗಳು ಬೇರೆ ಬೇರೆ ನೆಲೆಯಲ್ಲಿ ನಿರ್ವಚನಗೊಳ್ಳುತ್ತದೆ.ಪಲ್ಲಟವು ಸಾಕಷ್ಟು ಬದಲಾವಣೆಗಳಿಗೆ ಕಾರಣವಾಗಿದೆ. ಹೀಗೆ ಗೌಡರು ಬದಲಾದ ಕಾಲಘಟ್ಟದಲ್ಲಿ ಹಲವಾರು ವಿಚಾರಗಳಲ್ಲಿ ತಮ್ಮ ಅಸ್ವಿತ್ವವನ್ನು ಕಳೆದುಕೊಂಡಿದ್ದಾರೆ.ಎಂಬುದನ್ನು ನಾವಿಂದು ಗಮನಿಸಬಹುದು.ಚಿತ್ರ ಸಂತೆ

ಚಿತ್ರ ಸಂತೆ
ಕಲಾಂರವರ ಚಿನ್ನದ ಮಾತು

Google+ Badge