ಶನಿವಾರ, ನವೆಂಬರ್ 17, 2018

ಪಡ್ಡಾಯಿ (ತುಳು ಸಿನೆಮಾ)

ಪ್ರಾದೇಶಿಕ ಭಾಷೆಯ ಚಿತ್ರ ಪಡ್ಡಾಯಿ.ಮೂಲ ಷೇಕ್ಸಪೀಯರ್ ನಾಟಕದ ಮ್ಯಾಕ್ಸಬೇತ್ ನಾಟಕದ ಅವತರಣಿಕೆ.  ದೈವ ಎಂದರೆ ಮನಸ್ಸು. ಏಳುಬೀಳಿನ ಜೋತೆಗೆ ಬದುಕಿನ ಅವಸ್ಥೆಯನ್ನು ಹೇಳಲಾಗುತ್ತದೆ.
ತುಳುನಾಡಿನ ಮೋಗವೀರ ಸಮುದಾಯದ ಕಥನವನ್ನು ಇದರಲ್ಲಿ ತೋರಿಸಲಾಗಿದೆ.ಕಡಲ ಮೇಲೆ ಇದ್ದ ನಿಯಂತ್ರಣ ಹಾಗೂ ಅದರ ಜೋತೆಗಿನ ಒಡನಾಟ ವನ್ನು ಚೆನ್ನಾಗಿ ತೋರಿಸಲಾಗಿದೆ.  ತುಳುನಾಡಿನ ಆರಾಧನಾ ಪರಂಪರೆಯನ್ನು ವಿಶೇಷವಾಗಿ ತೋರಿಸುವ ಮೂಲಕ ಚಿತ್ರಕ್ಕೆ ಹೊಸಮೆರುಗನ್ನು ನೀಡಲಾಗಿದೆ. ಮೋಗವೀರ ಸಮುದಾಯದ ಬದುಕು, ಜೀವನಕ್ಕೆ ಹೀಡಿದ ಕನ್ನಡಿ.  ಭೂಮಾಲಿಕ ವ್ಯವಸ್ಥೆ ಯಿಂದ ಬಿಡುಗಡೆ ಯ ಜೋತೆಗೆ ಹೊಸ ಬದುಕನ್ನು ಕಟ್ಟಿಕೊಂಡ ಮೋಗವೀರ ಸಮುದಾಯದ ಚಿತ್ರಣ ಇದಾಗಿದೆ.
ಸಂಪ್ರದಾಯಿಕ, ಯಾಂತ್ರಿಕ ಮೀನುಗಾರಿಕೆ ಯ ಕುರಿತ ಪ್ರಶ್ನೆ ಎತ್ತುತ್ತಾ ಸಮುದ್ರದಲ್ಲಿ ನಡೆಯುವ ಜಗಳ, ಗಲಾಟೆ ಇತ್ಯಾದಿಗಳನ್ನು ಸೂಕ್ಷ್ಮವಾಗಿ ಹೇಳಲಾಗಿದೆ.  ಹಳೆ ಹೊಸದು( ತಲೆಮಾರು) ಇವುಗಳ ಸಂಘರ್ಷ ವನ್ನು ತೋರಿಸಲಾಗಿದೆ. ಮೋಗವೀರರ ಬದುಕಿನ ಡೋಲಾಯಾಮಾನವಾಗಿರುವ ಸ್ಥಿತಿಯನ್ನು ಪರೋಕ್ಷವಾಗಿ ಹೇಳಲಾಗುತ್ತದೆ. ಗುಳಿಗ ಮತ್ತು ಹುಲಿ ಎರಡು ಚಿತ್ರಣದ ಮೂಲಕ ಪ್ರತಿಮೆಯನ್ನು ನೀಡಲಾಗಿದೆ. ಉಂಡ ಮನೆಗೆ ಗುಂಡು ಹಾಕುವ ಮೂಲಕ  ಆತಿ ಆಸೆ ಗತಿ ಗೇಡು ಹಾಗೂ ಹಾಸಿಗೆ ಇದಷ್ಟು ಕಾಲು ಚಾಚು ಎನ್ನುವ ಮಾತನ್ನು ಮಾರ್ದನಿಸಿದಂತೆ ಭಾಸವಾಗುತ್ತದೆ.     ಆಸೆ ಮಿತಿ ಎಂಬುದು ಇಲ್ಲ.  ಹದ್ದು ಕಬಳಿಸುವಿದಕ್ಕೆ ಹೊಂಚು ಹಾಕುತ್ತಿರುವ ಮೂಲಕ ಮನುಷ್ಯನ ಬದುಕಿಗೆ ತುಲನೆ ಮಾಡಲಾಗಿದೆ.
ದೊಡ್ಡವನಾಗಬೇಕು ಎಂಬ ಬಯಕೆ ಆಸೆ ಮನುಷ್ಯ ಸಹಜ ಗುಣ.ಅದಕ್ಕೆ ಮನುಷ್ಯ ತನ್ನ ತನ್ನನ್ನು ತಾನು ನಿಯಂತ್ರಣದಲ್ಲಿ ಇಡಬೇಕು ಎನ್ನುವ ಸಂದೇಶದ ಜೊತೆಗೆ ಬದಲಾದ ಬದುಕಿನ  ಚಿತ್ರಣದ ಜೋತೆಗೆ  ಮನಸ್ಸು ದೇಹದ ನಡುವಿನ ಅಂತರವನ್ನು ಹೇಳುತ್ತಾ ಬದುಕಿನ ಬಿರುಗಾಳಿಯ ಮದ್ಯೆ ನೆಮ್ಮದಿ ಯನ್ನು ಕಳೆದೊಂಡಿದೆ.  ಮಿಂಚಿನ ಓಟಕ್ಕೆ ಬಲಿ ಬಿದ್ದರೆ ಇದೆ ಸಮಸ್ಯೆಯಾಗುವುದು. ಹೊಸ ವಸ್ತುಗಳ ಕೊಳ್ಳುವ ವ್ಯಾಮೋಹ ಮನುಷ್ಯನನ್ನು ಅದಪತನಕ್ಕೆ ಕಾರಣ. ಚೋಮದುಡಿಯ ಸಂಘರ್ಷವನ್ನು ಸ್ವಲ್ಪ ತುಲನೆ ಮಾಡಬಹುದು.  ಜೋತೆಗೆ ತಪ್ಪಿಗೆ ಸರಿಯಾದ ಶಿಕ್ಷೆ ಖಂಡಿತ ಸಿಗುತ್ತದೆ ಎನ್ನುವ ಸಂದೇಶವನ್ನು ನೀಡಲಾಗಿದೆ.


ಶುಕ್ರವಾರ, ನವೆಂಬರ್ 16, 2018

ತಳಂಗ್ ನೀರ್(ಕೊಡವ ಸಿನೆಮಾ)

ಪ್ರಾದೇಶಿಕ ಭಾಷೆಯ ಚಿತ್ರವಾದ ಇದು ಕೊಡಗಿನ ಪರಿಸರ ಮತ್ತು ಕೊಡವ ಸಂಸ್ಕೃತಿಯನ್ನು, ಆಹಾರವನ್ನು ಹಾಸು ಹೊಕ್ಕಾಗಿ ತೋರಿಸಲಾಗಿದೆ. ಕೊಡವರ ದೇಶ ಸೇವೆ ಹಾಗೂ ದೈರ್ಯ ಸ್ಥೇರ್ಯವನ್ನು ಕೇಂದ್ರಕರಿಸಲಾಗಿದೆ.ನೈಜತೆಯ ಜೋತೆಗೆ ಅವರ ಪರಾಕ್ರಮವನ್ನು ಈ ಚಿತ್ರವನ್ನು ತೋರಿಲಾಗಿದೆ.ತಂದೆತಾಯಿರ ಬಗೆಗಿನ ಮಮತೆ ಯನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಕುಲಿಯಾಳಿನ  ಸಮಸ್ಯೆ ಬರಿಯ ಕೊಡಗಿದ್ದು ಅಲ್ಲ ಅದು ಕರ್ನಾಟಕದ ಸಮಸ್ಯೆ ಎಂಬುದನ್ನು ಪರೋಕ್ಷವಾಗಿ ಹೇಳಲಾಗಿದೆ.ಕರಾಳ ಸಮಸ್ಯೆಯಾದ ಕ್ಯಾನ್ಸರ್ ಎಂಬ ಮಹಾಮಾರಿಯ ಬಗೆಗೆ ಎಚ್ಚರಿಕೆ ಸಂದೇಶ ವನ್ನು ನೀಡಲಾಗಿದೆ.ಇತ್ತೀಚಗೆ ಕೊಡಗಿನಲ್ಲಿ ನಡೆದ ದುರಂತಕ್ಕೆ ಕಾರಣವಾದ ಸಮಸ್ಯೆಗಳ ಬಗ್ಗೆ ವಿವರಿಸಲಾಗಿದೆ. ಕರ್ನಾಟಕದ ಶಾಲೆಗಳ ದುರಂತ
ಮತ್ತು ಇಂದಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಹೇಳಲಾಗಿದೆ.
ಕೊಡಗಿನ ಇಂದಿನ ಸಮಸ್ಯೆ ಹಾಗೂ ಕೊಡುಗು ತನ್ನ ಅಸ್ಥಿತ್ವವನ್ನು ಕಳೆದುಕೊಂಡಿದೆ ಎಂಬುದನ್ನು ಸಾರಿ ಹೇಳಿದಂತೆ ಇದೆ. ಕಾಲಾಂತರದ ತುಲನೆ ಹಾಗೂ ಬದುಕು ಇವುಗಳನ್ನು ಪರಸ್ಪರ ಎದುರು ಬದುರಾಗಿ ಮೆಳೈಸಲಾಗಿದೆ.  ಸಾವಿನ ಬಗ್ಗೆ ಪ್ರಶ್ನೆಯನ್ನು ಚಿಕ್ಕ ಮಗು ಎತ್ತ್ತುತೆ ಸಾವಿನ ಬಗೆಗೆ ಆಕೆಯ ಪ್ರಶ್ನೆ ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುತ್ತದೆ. ಮನುಷ್ಯನ ಬದುಕಿನ ವಾಸ್ತವಿಕವಾಗಿ ತೆರೆದು ತೋರಿಸಲಾಗಿದೆ. ಇಂದಿನ ಮನುಷ್ಯನ ಭಾವನೆ ಬಾವಚಿತ್ರವನ್ನು ನೀರಲ್ಲಿ ಬಿಟ್ಟ ಹಾಗೆ. ಕೊಡಿಗಿನ ಎಲ್ಲಾ ಬದಲಾವಣೆಗೆ ನಾವೆ ಕಾರಣ ಎಂಬುದನ್ನು ಸಾರಿ ಹೇಳುತಿತ್ತು. ಬದಲಾವಣೆ ನಮ್ಮ ಚರಿತ್ರೆಯನ್ನು ನಾವು ಮರೆತಿದ್ದೇವೆ  ಜೋತೆಗೆ ಅದನ್ನು ಮತ್ತೆ ಮರು ನಿರ್ಮಾಣ ಮಾಡಬೇಕು ಎನ್ನುವ ಸಂದೇಶವನ್ನು ನೀಡುತ್ತದೆ. ಪ್ರಕೃತಿಯ ಜೋತೆಗೆ ಸಂವಾದ ಮನುಷ್ಯ ನಡೆಸುತ್ತಿಲ್ಲ. ಅದರ ಬದಲಾಗಿ ಇಂದು ಮಾಫಿಯಗಳು ಇವೆ .
ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷವನ್ನು ಹೇಳಲಾಗಿದೆ. ಬದುಕು ಯಾವುದು ಸುಂದರ ?. ಎನ್ನುವ ಪ್ರಶ್ನೆಯನ್ನು ಎತ್ತುತ್ತಾ  ಕಾಲದ ಮೇಲೆ ತೂಕವನ್ನು ಹೇರಲಾಗಿದೆ. ಕಳ್ಳ ಎಂದರೆ ಯಾರು. ಎನ್ನುವ ಪ್ರಶ್ನೆ ಬಹಳ ಮುಖ್ಯವಾದ್ದು. ಹಣ ಇತ್ತು ಆದರೆ ಒಳ್ಳೆಯ ಹೃದಯ ಇರಲಿಲ್ಲ.ನಮ್ಮ ಮಣ್ಣು ನಮ್ಮ ನಾಡು ಎನ್ನುವ ಪರಿಕಲ್ಪನೆ ನಮ್ಮಲ್ಲಿ ಇರಬೇಕು.  ಕೊಡವರ ಸಂಸ್ಕೃತಿ ಮತ್ತು ಆಚಾರ ಚಿಚಾರ, ಸಂಪ್ರದಾಯ- ಆಚರಣೆ ,ಹಬ್ಬ ಗಳ ಬಗ್ಗೆ ಕೊಡವರ ಚಿತ್ರಣದ ಕುರಿತು ಸೂಕ್ಷ್ಮ ಎಚ್ಚರಿಕೆಯನ್ನು ನೀಡಲಾಗಿದೆ.