ಮಂಗಳವಾರ, ಅಕ್ಟೋಬರ್ 24, 2017

ತುಳು ವಿಕಿಪೀಡಿಯಕ್ಕೆ ವರ್ಷದ ಸಂಬ್ರಮ.




  ತುಳು ಭಾಷೆಯಲ್ಲಿ ವಿಶ್ವಕೋಶ ಅಥವಾ ವಿಶ್ವಕೋಶ ಶೈಲಿಯ ಪುಸ್ತಕವನ್ನು ತಯಾರಿಸಿ ಮುದ್ರಸಿ ಹಂಚಿದರು, ಅವು ಎಲ್ಲರಿಗೂ ಎಲ್ಲ ಕಾಲಕ್ಕೂ ಲಭ್ಯವಾಗುವುದಿಲ್ಲ. ಮಾತ್ರವಲ್ಲ  ಈಗೀನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಇರುವಾಗ ನಾವುಗಳಿಗೆ ಮಾಹಿತಿಯು ಬೆರಳ ತುದಿಯಲ್ಲಿ ಇರಬೇಕೆಂದು ಅನ್‍ಲೈನ್‍ನಲ್ಲಿ ಹುಡುಕಾಡುತ್ತೆವೆ. ಸವರುವ, ಹುಡುಕುವ  ಮಂದಿ ಇಂದು ಜಾಸ್ತಿ ಇರುವ ಸಂದರ್ಭದಲ್ಲಿ, ಸಾಕ್ಷಿ ಎಂಬಂತೆ ಯುವ ಜನಾಂಗ ಅದೆ ಹಾದಿಯಲ್ಲಿ ಮುನ್ನಡೆಯುತ್ತಿದೆ. ಹಾಗಿರುವಾಗ ಅಂತರ್‍ಜಾಲದಲ್ಲಿ ತುಳು ವಿಶ್ವಕೋಶ ತಯಾರಿಸುವುದು ಅಗತ್ಯವಾಗಿದೆ.
    ಅಂತರಜಾಲದಲ್ಲಿ ಎಲ್ಲ ಕಾಲಕ್ಕೂ ಎಲ್ಲರಿಗೂ ಲಭ್ಯವಿರುವ ಮಾತ್ರವಲ್ಲ ಎಲ್ಲರೂ ಯಾವುದೇ ನೀರ್ಬಂಧವಿಲ್ಲದೆ ಸಂಪಾದಿಸಬಹುದು ಸ್ವತಂತ್ರ ವಿಶ್ವಕೋಶ ವಿಕಿಪೀಡಿಯ. ಜಗತ್ತಿನ 288 ಭಾಷೆಗಳಲ್ಲಿರುವ ವಿಕಿಪೀಡಿಯ. ಇನ್ನೂ ಸುಮಾರು 250 ಭಾಷೆಯ ವಿಕಿಪೀಡಿಯಗಳು ತಯಾರಿ ಹಂತದಲ್ಲಿವೆ. ತುಳು ವಿಕಿಪೀಡಿಯದ ಕೆಲಸ 2001ರಲ್ಲಿ ಪ್ರಾರಂಭವಾಯಿತು.
    ತುಳು ವಿಕಿಪೀಡಿಯ ಲೈವ್ ಆಗಿ ಅಗಸ್ಟ್ 6ಕ್ಕೆ ಒಂದು ವರ್ಷದ ಸಂಬ್ರಮ. ತುಳು ಭಾಷೆ, ಸಂಸ್ಕøತಿಗೆ ಸಂಬಂಧಿಸಿದ ಮಾಹಿತಿ ಸಹಿತ, ಪ್ರಾಂಪಂಚಿಕ ಜ್ಞಾನ ತುಳುವಿನಲ್ಲಿ ಲಭ್ಯವಾಗಬೇಕು ಎಂಬ ಉದ್ಧೇಶದ ಮೂಲಕ ಆರಂಭಗೊಂಡದ್ದು ತುಳು ವಿಕಿಪೀಡಿಯ. ತುಳು ವಿಕಿಪೀಡಿಯದ ಅದಿಕೃತ ಕೆಲಸ 2007ರಲ್ಲಿ ಆರಂಭಗೊಂಡು 2017ಕ್ಕೆ ಜೀವಂತವಾಯಿತು. ತುಳು ವಿಕಿಪೀಡಿಯ ಭಾರತದ 23ನೇ ಭಾಷೆಯಗಿದೆ. ತುಳು ವಿಕಿಪೀಡಿಯ ಜಾಗತೀಕ ಭಾಷೆಯಾಗಿ ಗುರುತಿಸಿಕೊಂಡಿದೆ. ಕಳೆದ ವರ್ಷ ಅಗಸ್ಟ್ ತಿಂಗಳಿನಲ್ಲಿ  ಚಂಡಿಗಡ್‍ನ  ವಿಕಿಕಾನ್ಪರೇಸ್ಸ್‍ನಲ್ಲಿ  ವಿಕಿಪೀಡಿಯ ಪೌಂಡೇಶನ್‍ನ ಡೈರೆಕ್ಟರ್ ಕ್ಯಾಥರೀನಾ ಮಹೆರ್ರವರು ತಮ್ಮ ಭಾಷಣದಲ್ಲಿ ತುಳು ವಿಕಿಪೀಡಿಯವನ್ನು ಅಧಿಕೃತವಾಗಿ ಘೋಷಿಸಿದರು.
    ತುಳು ವಿಕಿಪೀಡಿಯದ ಕುರಿತು ಅನೇಕ ಕಾರ್ಯಗಾರಗಳನ್ನು ಮಂಗಳೂರು, ಉಡುಪಿ, ಕಾಸರಗೋಡು ಜಿಲ್ಲೆಯ ಹಲವು ಕಡೆಗಳಲ್ಲಿ ನಡೆಸಲಾಗಿದೆ, ಕೆಲವು ಕಾಲೇಜುಗಳಲ್ಲಿ ಶಿಕ್ಷಣ ಯೋಜನೆಯ ಭಾಗವಾಗಿ ವಿಕಿಪೀಡಿಯ ನಡೆಯುತ್ತಿದೆ.  ಈಗ 845 ಉತ್ತಮ ಲೇಖನಗಳು ಇವೆ. ಸುಮಾರು 2315 ಸಾವಿರ ಲೇಖನಗಳು ಕೆಲವು ತಾಂತ್ರಿಕ ತೊಂದರೆಯಿಂದ ಕೂಡಿದೆ. ಅಷ್ಟು ಮಾತ್ರವಲ್ಲ ಸಂಪಾದಕರು ಕೂಡ ಸಾಕಷ್ಟು ಹೆಚ್ಚಾಗಿದ್ದಾರೆ. 25 ಮಂದಿ ಸಕ್ರಿಯ ಸಂಪಾದಕರು ಇದ್ದಾರೆ.
     ಶಾಲೆಗಳಲ್ಲಿ ತುಳು ಕಲಿಯುವವರಿಗೆ ಅಗತ್ಯವಾದ ಅಧ್ಯಯನ ಸಾಮಾಗ್ರಿಯನ್ನು ತಯಾರಿಸುತ್ತಿದ್ದೇವೆ. ತುಳುವನ್ನು ಕಲಿಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಲೇಖನವನ್ನು ತಯಾರಿಸುತ್ತಿದ್ದೇವೆ, ತುಳು ಸಂಸ್ಕøತಿಯ ಬಗ್ಗೆ ತಿಳಿಯುವ  ಅಸಕ್ತರಿಗೆ ತುಳುವಿನಲ್ಲಿ ಮಾಹಿತಿ ಲಭ್ಯ.. ತುಳು ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ. ಸಾಹಿತ್ಯ, ಆಹಾರ, ಸಂಸ್ಕøತಿಗೆ ಸಂಬಂಧಿಸಿದ ಲೇಖನಗಳು ಸಹ ಇವೆ. ತುಳುವಿನಲ್ಲಿ ವಿಜ್ಞಾನದ ಲೇಖನಗಳು ಈಗ ಲಭ್ಯವಿದೆ.
  ವಿಕಿಪೀಡಿಯದಲ್ಲಿ ಬರೆಯುವುದರಿಂದ ಯಾವುದೇ ಆರ್ಥಿಕ ಲಾಭವಿಲ್ಲ. ಲೇಖಕರ ಹೆಸರನ್ನೂ ಲೇಖನದ ಕೆಳಗೆ ಬರೆಯುವ ಪರಿಪಾಠವಿಲ್ಲ. ವಿಕಿಪೀಡಿಯದಲ್ಲಿ ಬರೆಯುವುದೆಂದರೆ ನಿಜವಾದ ಸ್ವಾರ್ಥರಹಿತ ಸಮಾಜ ಸೇವೆ. ನಮ್ಮ ಭಾಷೆಯ ಉಳಿವಿಗೆ ಇದು ಅತೀ ಅಗತ್ಯ.
ತುಳು ವಿಕಿಪೀಡಿಯದಲ್ಲಿ ಹಲವು ಸಾಧ್ಯತೆಗಳು ಇವೆ.
    ವಿಕಿಕ್ಷನರಿ, ವಿಕಿ ಕಾಮಸ್ಸ್, ವಿಕಿಸೋರ್ಸ್, ಮೇಟಾ ವಿಕಿ, ವಿಕಿ ಬುಕ್ಸ್, ವಿಕಿ ಡೇಟಾ, ವಿಕಿ ಕೋಟ್,ವಿಕಿ ನ್ಯೂಸ್ ಇತ್ಯಾದಿ ಯೋಜನೆಗಳಿಂದ ಸಾಕಷ್ಟು ಅಭಿವೃದ್ಧಿ ಪಡಿಸಬಹುದು.
ವಿಕಿಕ್ಷನರಿ:
 ತುಳು ಶಬ್ದಕೋಶ(ಡಿಕ್ಷನರಿ) ಇದರಲ್ಲಿ ವ್ಯಾಕರಣದ ಅರ್ಥ ವ್ಯಾಖ್ಯಾನವನ್ನು ಪಡೆದುಕೊಳ್ಳುತ್ತದೆ. ಒಂದು ಪದದ ಹಲವು ಅರ್ಥ ಛಾಯೆ ಇದರಲ್ಲಿ ಒಳಗೊಂಡಿರುತ್ತದೆ (ಸದ್ಯಕ್ಕೆ ಇದು ಲಭ್ಯವಿಲ್ಲ) ನಮ್ಮ ಮುಂದಿನ ಯೋಜನೆ ಇದಾಗಿದೆ..
ವಿಕಿ ಕಾಮನ್ಸ್:
  ಕಾಮಸ್ಸ್‍ನಲ್ಲಿ ಛಾಯಚಿತ್ರಗಳನ್ನು ಹಾಕುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಈಗಾಗಲೇ ಸಾಕಷ್ಟು ತುಳುನಾಡಿನ ಆಚರಣೆ, ಆರಾಧನೆಗೆ, ಆಹಾರಕ್ಕೆ  ಸಂಬಂಧಿಸಿದ  ಛಾಯಚಿತ್ರಗಳ ಇದರಲ್ಲಿ ಇದೆ. ಯಾರು ಬೇಕಾದರೂ ಉತ್ತಮ ಛಾಯಚಿತ್ರಗಳನ್ನು ಡೌನ್‍ಲೋಡ್ ಮಾಡಬಹುದು.
ಮೇಟಾ ವಿಕಿ:
   ಇದರಲ್ಲಿ ಕರಾವಳಿಯ ಸಂಪಾದಕರ ಅಧಿಕೃತ ಗುಂಪು ಇದರಲ್ಲಿ ಇದೆ. ಈ ಗುಂಪು ತಿತಿಜಿನಿಂದ ಮಾನ್ಯತೆಯನ್ನು ಪಡೆದಿದೆ, ಮಾತ್ರವಲ್ಲದೆ ಭಾರತದ ಸಂವಿಧಾನ ಬದ್ದ ಸಂಘವಾಗಿದೆ.

ವಿಕಿ ಬುಕ್ಸ್:
ತುಳುವಿನಲ್ಲಿ ಪ್ರಕಟಗೊಂಡ ಪುಸ್ತಕಗಳನ್ನು ಇದರಲ್ಲಿ ಹಾಕಬಹುದು. ತುಳುವಿನಲ್ಲಿ ಪ್ರಕಟಗೊಂಡ ಪುಸ್ತಕವನ್ನು ಉಚಿತವಾಗಿ ಯಾರು ಬೇಕಾದರು ಉಪಯೋಗಿಸಿಕೊಳ್ಳಬಹುದು. ಮುಂದಿನ ಕಾರ್ಯಯೋಜನೆ(ಸದ್ಯಕ್ಕೆ ಇದು ಲಭ್ಯವಿಲ್ಲ).
 ವಿಕಿ ಡೇಟಾ:
ವಿಕಿಪೀಡಿಯದಲ್ಲಿ ಇರುವ ಸರಳವಾಗಿ ಅಧಿಕೃತವಾಗಿ ಸಂಕ್ಷೀಪ್ತ ಮಾಹಿತಿ ಇದರಲ್ಲಿ ಇದೆ. ವಿಕಿ ಡೇಟಾದಲ್ಲಿರುವ  ಯಾವುದೆ ಭಾಷೆಯ ವಿಕಿಪೀಡಿಯದ ಮಾಹಿತಿಯನ್ನು ಒಳಗೊಳಂಡಿರುತ್ತದೆ.(ಕೆಲವು ಲೇಖನಗಳಲ್ಲಿ ಲಭ್ಯ.)
 ವಿಕಿ ಕೋಟ್:
ಈ ಯೋಜನೆಯಲ್ಲಿ ಗಾದೆ ಮಾತುಗಳು, ತುಳು ಕಬಿತಗಳನ್ನು, ಸಂದಿ, ಪಾಡ್ದನಗಳನ್ನು, ಇತ್ಯಾದಿಗಳನ್ನು ಹಾಕಬಹುದು. ಮುಂದಿನ ಕಾರ್ಯಯೋಜನೆ(ಸದ್ಯಕ್ಕೆ ಇದು ಲಭ್ಯವಿಲ್ಲ).
ತುಳುವರು ಏನು ಮಾಡಬೇಕು?. 
   ತುಳು ಸಂಸ್ಕøತಿಯನ್ನು ವಿಶ್ವಕ್ಕೆ ಪರಿಚಯಿಸುವ ದೃಷ್ಠಿಯಿಂದ ವಿಕಿಪೀಡಿಯದಲ್ಲಿ ನಮ್ಮ ನಾಡಿನ ವಿಶಿಷ್ಟತೆಯನ್ನು ನಾವು ತಿಳಿಸಬೇಕು.ಅಂದರೆ ಮಾಹಿತಿಯನ್ನು ಪ್ರತಿಯೊಂದು ಭೌತಿಕ ಅಕರಗಳ ಬಗ್ಗೆ ಮಾಹಿತಿಯನ್ನು ಹಾಕಬೇಕು. ಅಟಿಡೊಂಜಿ ದಿನ, ಅಟಿಡೊಂಜಿ ಕೂಟೊ, ಅಟಿ ತಮ್ಮನ,  ಇತ್ಯಾದಿ ಆಡಂಬರಗಳನ್ನು ನಿಲ್ಲಿಸಿ, ತುಳು ಸಂಸ್ಕøತಿಯನ್ನು ಇಡಿ ಪ್ರಪಂಚಕ್ಕೆ ತಿಳಿಸುವ ಕೆಲಸವನ್ನು ನಾವು ಮಾಡಬೇಕು. ಅಟಿಡೊಂಜಿ ದಿನವನ್ನು ಒಂದು ದಿನ ಆಚರಿಸುವುದರಿಂದ ಸ್ಥಳಿಯ ಪತ್ರಿಕೆಯಲ್ಲಿ ವರದಿಗಳು ಬರಬಹುದು. ಜಾಗತೀಕವಾಗಿ ನಮ್ಮ ಸಂಸ್ಕøತಿಯನ್ನು ತೆರೆದಿಡುವುದು ಹೇಗೆ?. ತುಳು ಭಾಷೆಯನ್ನು ಬೆಳೆಸುವುದು ಹೇಗೆ?. ತುಳು 8 ಪರೀಚ್ಛೇದಕ್ಕೆ ಸೇರಬೇಕು ಎನ್ನುವ ಕೂಗು ಜಿಲ್ಲೆಯಿಂದ ಹೊರಗೆ ಕೇಳಿಸುತ್ತಿದೆಯಾ?. ಪರೀಚ್ಛೇಧದ ಮಾತು ರಾಜಕೀಯ ಪ್ರೇರಿತವಾದದು. ತುಳುವಿಗೆ ನಾವೇನು ಮಾಡಬಹುದು?. ಎನ್ನುವುದನ್ನು ಯೋಚಿಸಿದ್ದಿರಾ?. ಇತ್ಯಾದಿ ಪ್ರಶ್ನೆಗಳನ್ನು ಕೇಳಿಕೊಂಡಾಗ ಉತ್ತರವಿದೆಯಾ?. ಜಾಗತೀಕವಾಗಿ ತುಳು ಬೆಳೆಯುತ್ತಿದೆ.
       ತುಳು ಬೆಳೆಸುವ ಮೂಲಕ ತುಳು ಸಂಸ್ಕøತಿಯನ್ನು ಉಳಿಸಿ. ಅಳಿಯುವ ಅಂಚಿಗೆ ಸರಿಯುವ ಮುನ್ನ ನಮ್ಮ ಆರಾಧನೆ ,ಆಚರಣೆಗಳನ್ನು  ಕುರಿತು ಮಾಹಿತಿ ಲಭ್ಯವಾಗಬೇಕು ಎನ್ನುವ ಕಾಳಜಿ ನಮ್ಮಲ್ಲಿ ಇರಬೇಕು. ಆದರೆ ಸುಳ್ಯದ ಬಗ್ಗೆ ಮಾಹಿತಿ ಮಾತ್ರ ಕಡಿಮೆ ಇದೆ. ಇದನ್ನು ತುಂಬಿಸುವ ಕೆಲಸ ನಡೆಯಬೇಕು. ತುಳು ವಿಕಿಪೀಡಿಯದ ವಿಳಾಸ-  ಣಛಿಥಿ.ತಿiಞiಠಿeಜiಚಿ.oಡಿg. ಇಲ್ಲಿಗೆ ಭೇಟಿ ನೀಡಿ ಖಾತೆ ತೆರೆದು, ಸಂಪಾದಿಸಲು ಪ್ರಾರಂಭಿಸಿ. ನೆನೆಪಿಡಿ ಇದು ಒಂದು ವಿಶ್ವಕೋಶ. ವಿಶ್ವಕೋಶ ಶೈಲಿಯ ಮಾಹಿತಿ ಅಗತ್ಯವಿದೆ. ಯಾವುದೇ ವೈಯಕ್ತಿಕ ಅಭಿಪ್ರಾಯ, ಬ್ಲಾಗ್ ಮಾದರಿಯ ಲೇಖನಗಳನ್ನು, ಕಥೆ, ಕವನ, ಕಾದಂಬರಿ, ನಾಟಕ ಇತ್ಯಾದಿಗಳಿಗೆ ಅವಕಾಶವಿಲ್ಲ. ಇಂದು ಲೇಖನವನ್ನು ಪ್ರಾರಂಭಿಸಿವ ಮುನ್ನ ಅದೇ ಶೀರ್ಷಿಕೆಯನ್ನು ಅಥವಾ ಬೇರೆ ಯಾವುದೆ ವಿಷಯದಲ್ಲಿ ಅದೇ ಶೀರ್ಷಿಕೆ ಇದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ತುಳು ವಿಕಿಪೀಡಿಯವನ್ನು ಬೆಳೆಸಿ. ತುಳು ಭಾಷೆ ಉಳಿಸಿ, ಬೆಳೆಸಿ.