ಸೋಮವಾರ, ಸೆಪ್ಟೆಂಬರ್ 07, 2015

ಪ್ರಾದೇಶಿಕ ಅಸ್ಮಿತೆಯಾಗಿ ಮೂಡಿಬಂದಿರುವ "ಜಾತ್ರೆ"

ವಿಮರ್ಶೆ 

ಪ್ರಾದೇಶಿಕ ಅಸ್ಮಿತೆಯ ಕೊಂಡಿಯೊಳಗೆ ಸಂಬಂಧವನ್ನು ಹೊಂದಿರುವ ಜಾತ್ರೆ, ಇಲ್ಲಿ ನೆನಪುಗಳುದ್ದಕ್ಕೂ ಜಾತ್ರೆ ಎಂಬುದು ನಿರೂಪಕಿಯ ಕಣ್ಣಿನಲ್ಲಿರುವ ಭಾವಕೋಶವನ್ನು ಪ್ರಭಾವಿಸಿದ ನೆಲೆಯಲ್ಲಿ ಅನಾವರಣಗೊಂಡಿದೆ. ಜಾತ್ರೆ ಎನ್ನುವುದು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬರಹದ ಚೌಕಟ್ಟನ್ನು ಮುರಿಯುವ ಮತ್ತು ಬರಹವನ್ನು ಹಿಗ್ಗಿಸುವುದನ್ನು ಕಾಣಬಹುದು, ಬರಿಯ ನೆನಪುಗಳ ಕಥನ ಮಾತ್ರವಲ್ಲ ಸಾಂಪ್ರದಾಯಿಕ ಕಥನ ಕ್ರಮವನ್ನು ಮೀರುವ ಮೂಲಕ ವಯಸ್ಸಿನ ಅಂತರಗಳ ಮೂಲಕ ಬಾಲ್ಯ, ಹರೆಯ, ತಾರುಣ್ಯ, ವಿವಾಹದ ನಂತರ, ವೃದ್ಧಾಪ್ಯಗಳಲ್ಲಿ ನಿಂತು ನಿರೂಪಕಿಯು ಕಥೆಯನ್ನು ಹೇಳುವ, ವಿಶ್ಲೇಷಿಸುವ, ವ್ಯಾಖ್ಯಾನವನ್ನು ಮಾಡುವಂತಹಧನ್ನು ಗುರುತಿಸಬಹುದು.
ವೈದೇಹಿಯವರ ಜಾತ್ರೆಯಲ್ಲಿ ಪ್ರಾದೇಶಿಕ ಅಸ್ಮಿತೆಗಳು ಮೂಡಿಬಂದಿರುವ ಬಗೆಯನ್ನು ಗಮನಿಸಿದರೆ.
  • ನುಡಿ.
  • ನಾಡು.
  • ಸಂಸ್ಕøತಿ.
  • ಸಂಪ್ರದಾಯ.
  • ಜಾತಿ

ಜಾತ್ರೆಯಲ್ಲಿ ಬರುವ ನುಡಿಯ ಅಸ್ಮಿತೆ(Iಜeಟಿಣiಣಥಿ) ಆ ಪ್ರದೇಶದ ಭಾಷೆಯ ಗುರುತಿಸಿಕೊಳ್ಳುವಿಕೆಯನ್ನು ಮುಖ್ಯವಾಗಿ ಗಮನಿಸಬಹುದು. ಆರಂಭದಿಂದ ಕೊನೆಯವರಗೂ, ಹೇರಳವಾಗಿ ಕನ್ನಡದ ಉಪಭಾಷೆಯಾದ ಕುಂದಗನ್ನಡದ ಪದಗಳು ಕಾಣಸಿಗುತ್ತವೆ. ಅಕ್ಕಾ, ಇಕಣಿ, ಇದ್ದಿ, ಉಳ್ಳೆದು, ಹ್ವಾತಿ, ಹ್ವಾರೆ, ಸರ್ತ ಇತ್ಯಾದಿ...... ಪದಗಳು ಬಳಕೆಯಾಗಿವೆ. ಒಂದು ಭಾಷೆಯು ಗುರುತಿಸಿಕೊಳ್ಳುವುದು ಅದರ ಬಳಕೆಯಿಂದ ಮಾತ್ರವಲ್ಲ ಬರವಣಿಗೆಯಲ್ಲಿ ಉಪಯೋಗಿಸಿದಾಗ. ಕುಂದಗನ್ನಡದ ಭಾಷೆ  ಇರುವುದು ಅ ಪ್ರದೇಶದಲ್ಲಿ ಎನ್ನುವುದು ನಾವು ಗುರುತಿಸಿಕೊಳ್ಳಬಹುದು. ನಿರೂಪಕಿಯ ಭಾಷೆ ಕೂಡ ಅದೆ ಎನ್ನುವ ಹಾಗೇನೆ ತಮಗೆ ಬೇಕಾದ ಹಾಗೆ ಆ ಭಾಷೆಯನ್ನು ಬಳಸಿರುವುದನ್ನು ಗಮನಿಸಬಹುದು. ಹೀಗೆಂದ ಮಾತ್ರಕ್ಕೆ ಬಳಕೆ ಮಾಡಬಾರದೆಂದಲ್ಲ, ಆ ಪ್ರದೇಶದ ಭಾಷೆಯ ಗುರುತಿಸುವಿಕೆಯನ್ನು ವೈದೇಹಿಯವರು ಎತ್ತಿ ಹಿಡಿದಿದ್ದಾರೆ.
ವೈದೇಹಿಯವರು ಒಂದು ನಿರ್ದಿಷ್ಟ ಎಲ್ಲೆಯ ಒಳಗಿದ್ದು, ಒಂದು ರೀತಿಯಲ್ಲಿ ಸಿಂಹಾವಲೋಕನವನ್ನು ಮಾಡುವ ಕ್ರಮವನ್ನು ನಾವು ಗಮನಿಸಬಹುದು. ನಿರೂಪಕಿಯು ಕೋಟೇಶ್ವರ ತೇರು ಅದರ ವಿಶೇಷವನ್ನು ಹೇಳುವಾಗ ಕಬ್ಬಿನ ಕೋಲು ಸಮೇತ ಮನೆಗೆ ಬರುವುದು(ವಿವರಗಳಿಗೆ ಪುಟ ಸಂಖ್ಯೆ.15) ಅಲ್ಲಿನ ವಾಡಿಕೆ. ಕುಂದಾಪುರದ ದೊಡ್ಡ ಹಬ್ಬವೆಂದು ಹೇಳುತ್ತಾರೆ, ಕೋಟೆಶ್ವರ ತೇರುವಿನ ದಿನ ಕೈ ತುಂಬ ಬಳೆಯನ್ನು ಇಡುವುದು, ಆ ನಾಡಿನ ವಿಶೇಷವಾಗಿದೆ.(ವಿವರಗಳಿಗೆ ಪುಟ.22)ಹೀಗೆ ಕುಂದಾಪುರದ ಜನಕ್ಕೆ ಸುತ್ತ-ಮುತ್ತ ಜಾತ್ರೆಯ ವಿವರಗಳನ್ನು ಸಹ ನೀಡುತ್ತಾರೆ.( ವಿವರಗಳಿಗೆ ಪುಟ ಸಂಖ್ಯೆ.15) ಹೀಗೆ ದೇವರು ಪಟ್ಟಣದ ಸವಾರಿಯನ್ನು(ವಿವರಗಳಿಗೆ ಪುಟ ಸಂಖ್ಯೆ.61) ನೋಡುವಾಗಿನ ರೋಚಕತೆಯನ್ನು ವೈದೇಹಿಯವರು ದಾಖಲುಮಾಡುತ್ತಾರೆ. ಅದು ಮಾತ್ರವಲ್ಲ, ಕೋಟೇಶ್ವರ ತೇರನ್ನು ಜಗತ್ತಿಗೇ ಪರಿಚಯಿಸುವ ಕೆಲಸವನ್ನು ನಿರೂಪಕಿ ಮಾಡುತ್ತಿದ್ದಾರೆ. ಹಾಗೆನೆ ಕುಂದಾಪುರವೆನ್ನುವ ಪ್ರದೇಶವನ್ನು ಸಹ ಆಕೆ ಪ್ರತಿನಿದಿಕರಿಸುವ ಮೂಲಕ ನಾಡನ್ನು ಎತ್ತಿ ಹಿಡಿದಿದ್ದಾರೆ.
ಕುಂದಾಪುರವನ್ನು ಕರಾವಳಿಯ ಸಾಂಸ್ಕøತೀಕ ರಾಜಧಾನಿ ಎಂದು ಕರೆದರೂ ತಪ್ಪಿಲ್ಲ, ಹಾಗೇನೆ ಅಲ್ಲಿಯ ಜನರ ಉಡುಗೆ-ತೊಡುಗೆ, ಆಚಾರ-ವಿಚಾರ, ಹಬ್ಬ-ಹರಿದಿನಗಳು ಇತರ ಪ್ರದೇಶಗಳಿಗೆ ಹೋಲಿಸಿದರೆ ತುಂಬ ಬಿನ್ನವಾಗಿದೆ, ಮಾತ್ರವಲ್ಲ ಎಲ್ಲಾ ರೀತಿಯ ಹಬ್ಬಗಳ ತವರೂರು ಎಂದೆನಿಸಿದೆ. ಹಾಗೇನೆ ಜನಪದ ಆಟವನ್ನು ಹೇಳುವ ಮೂಲಕ(ವಿವರಗಳಿಗೆ ಪುಟ ಸಂಖ್ಯೆ.7) ನಿರೂಪಕಿ ಕೋಟೇಶ್ವರ ಹಬ್ಬದ ವಿವರಗಳನ್ನು ನೀಡುತ್ತಾಳೆ.(ವಿವರಗಳಿಗೆ ಪುಟ ಸಂಖ್ಯೆ.15) ಜಾತ್ರೆಯ ಸವಿಯನ್ನು ಆರಂಭದಿಂದಲೂ ಕೊನೆಯವರೆಗು ಓದುಗರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ನಮ್ಮೂರ ಸಂಸ್ಕøತಿ ಎನ್ನುವುದು ಆ ಪ್ರದೇಶದ ಜನರಲ್ಲಿ ಇದೆ, ಎನ್ನುವ ಮೂಲಕ ನಮ್ಮೂರ ಸಂಸ್ಕ್ರತಿ ಹೀಗೆ ಇದೆ ಎಂದು ಹೇಳುವುದನ್ನು ಗಮನಿಸಬಹುದು.
ಕುಂದಾಪುರದ ಜನರು ಸಂಪ್ರದಾಯ ಬದ್ಧರು ಎನ್ನುವುದರಲ್ಲಿ ಎರಡು ಮಾತಿಲ್ಲ. ಇದು ಆ ಪ್ರದೇಶದ ಅಸ್ಮಿತೆಗಳಲ್ಲಿ ಒಂದು ಎಂದು ಗಮನಿಸಬಹುದು. ಹೀಗೇನೆ ಜೀವ ಇರುವ ಮತ್ತು ಇಲ್ಲದಿರುವ ವಸ್ತುಗಳ ಮದ್ಯೆ ಭಿನ್ನತೆಗಳಿವೆ. ತಲೆಗೆ ಜೀವ ಇಲ್ಲದ ವಸ್ತುವನ್ನು ಮುಡಿಯಬಾರದು ಮಾತ್ರವಲ್ಲ ಅದು ಅಪಶಕುನ ಎಂದು ಹೇಳುವುದು(ವಿವರಗಳಿಗೆ ಪುಟ ಸಂಖ್ಯೆ.10). ಮತ್ತೊಂದು ವಿಚಾರ ಬಹಳ ಮುಖ್ಯವಾದದ್ದು ಯಾವುದೆಂದರೆ ಕೈ ತುಂಬ ಬಳೆ ಧರಿಸಬೇಕು ಎನ್ನುವುದು ಒಂದು ಹಿಂದಿನಿಂದ ಬಂದಿರುವ ಸಂಪ್ರದಾಯ. ಅದನ್ನು ಕುಂದಾಪುರದ ಜನ ಚಾಚು ತಪ್ಪದೆ ಪಾಲಿಸುತ್ತಿದ್ದಾರೆ. (ವಿವರಗಳಿಗೆ ಪುಟ ಸಂಖ್ಯೆ.17) ಹೆಣ್ಣಿನ ಸೌಂದರ್ಯ ಇರುವುದು ಅಲಂಕಾರದಲ್ಲಿ. ಆದರೆ ವಿಧವೆ ಎಂದು ತಿಳಿದಾಗ ಆಕೆಯನ್ನು ನಿರಾಭರಣಗೊಳಿಸುವ, ಕುಂಕುಮ ಹಣೆಯಲ್ಲಿ ಇಡದ ಹಾಗೆ ಮಾಡಿದ, ಕಾಲುಂಗುರವನ್ನು ಕಳಚುವ ಮೂಲಕ ಒರ್ವ ಮಹಿಳೆಯನ್ನು ವಿಧವೆ ಎಂದು ತೋರಿಸುವ ಒಂದು ರೀತಿಯಲ್ಲಿ ಕೆಟ್ಟ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿರುವುದನ್ನು ಕಾಣಬಹುದು, ಅದು ಮಂಜತ್ತೆಯೆನ್ನುವ ಪಾತ್ರದಲ್ಲಿ ನೋಡಬಹುದು(ವಿವರಗಳಿಗೆ ಪುಟ ಸಂಖ್ಯೆ.25). ಜಾತ್ರೆಗೆ ಹೋಗುವವರ ತಲೆ ಮೇಲೆ ಗುಬ್ಬಿ ಕೂರುತ್ತೆ ಎನ್ನುವ ನಂಬಿಕೆಯೊ, ಸಂಪ್ರದಾವೊ ಇದನ್ನು ಸಹ ಪ್ರಾದೇಶಿಕತೆಯ ಅಸ್ಮಿತೆಯ ನೆಲೆಯಲ್ಲಿ ದಾಖಲು ಮಾಡುತ್ತಾರೆ. (ವಿವರಗಳಿಗೆ ಪುಟ ಸಂಖ್ಯೆ.30) ರಾತ್ರಿಯಾದ ಬಳಿಕ ಹುಡುಗಿಯರು ಮನೆ ಬಿಟ್ಟು ಹೋಗಬಾರದು ಎನ್ನುವ ನಿಯಮವನ್ನು ಜಾರಿಗೊಳಿಸುವ ಮೂಲಕ ಹಿಂದಿನಿಂದ-ಮುಂದಿನ ತಲೆಮಾರುಗಳಿಗೆ ಅದನ್ನು ದಾಟಿಸುವ ಮೂಲಕ ಉಳಿಸಿಕೊಳ್ಳಲಾಗಿದೆ (ವಿವರಗಳಿಗೆ ಪುಟ ಸಂಖ್ಯೆ.34). ಹೀಗೆ ಜಾತ್ರೆಗೆ ಹೋದವರು ಊಟ ಮಾಡದೆ ವಾಪಸ್ಸು ಬರುವಂತಿಲ್ಲ(ವಿವರಗಳಿಗೆ ಪುಟ ಸಂಖ್ಯೆ.42) ಎನ್ನುವ ರೂಢಿ ನಿಯಮವನ್ನು ನಿರೂಪಕಿ ದಾಖಲು ಮಾಡಿದ್ದಾರೆ.
ಸಾಮಾನ್ಯವಾಗಿ ಕರಾವಳಿಯಲ್ಲಿ ಸೌಹಾರ್ದತೆಯನ್ನು ಹಿಂದಿನ ಕಾಲದಲ್ಲಿ ಕಾಣಬಹುದು.ಆದರೆ ಈಗ ಹಾಗಿಲ್ಲ ಕಾಲ ಬದಲಾಗಿದೆ. ಆನ ಬದಲಾಗಿದ್ದಾರೆ, ಈಗ ಜಾತ್ರೆಯಲ್ಲಿ ಅನೇಕ ಜಾತಿ, ಒಂದೆ ಧರ್ಮಕ್ಕೆ ಸೇರಿದವರು ಮಾತ್ರ ಬರಬೇಕು ಎನ್ನುವ ವಿಘಟನೆಯನ್ನು ಕಾಣಬಹುದು. ಜಾತಿ,ಧರ್ಮದ ಅಸ್ಮಿತೆಯು ಪ್ರಾದೇಶಿಕತೆಯ ಮುಖ್ಯಭಾಗ ಎಂದು ಹೇಳಬಹುದು.ಜಾತ್ರೆಯೆನ್ನುವುದು ಎಲ್ಲಾ ಜನರನ್ನು ಒಂದುಗೂಡಿಸುವ ಕೇಂದ್ರವಾಗಿತ್ತು. ಮೇಲ್ವರ್ಗ ಮತ್ತು ಕೇಳವರ್ಗವೆನ್ನುವ ವರ್ಗವನ್ನು ಸೇರಿಸುವ, ಒಂದುಗೂಡಿಸುವ ಭಾಗವಾಗಿ ಜಾತ್ರೆ ಮೂಡಿ ಬಂದಿದೆ.ಬಳೆಗಾರ್ತಿ ಸೇಸಿಯಿಂದ ಕೈಗೆ ಬಳೆಯನ್ನು ತೋಡಿಸುವ ಜನ(ವಿವರಗಳಿಗೆ ಪುಟ ಸಂಖ್ಯೆ.17), ಬಲೂನು ಮಾರುವ ವ್ಯಕ್ತಿ ಆಗಿರಬಹುದು, ಮಾತ್ರವಲ್ಲ ಮೆತಿಲ್ಡಾಯೆನ್ನುವ ಹೆಣ್ಣು ಧರ್ಮವನ್ನು ಮೀರಿದ ಮಾತ್ರವಲ್ಲ ಸೌಹಾರ್ದಕ್ಕೆ ವೇದಿಕೆಯಾದ ಜಾತ್ರೆಯಲ್ಲಿ ಬಂದು ಭಾಗವಹಿಸುತ್ತಾಳೆ. (ವಿವರಗಳಿಗೆ ಪುಟ ಸಂಖ್ಯೆ.47) ಅಮೀನಾಬಿಯ ಪಾತ್ರವು ಕೂಡ ಅಷ್ಟೆ ಜಾತ್ರೆಯಲ್ಲಿ ಧರ್ಮ ಭೇದವನ್ನು ಮರೆತು ತಾನು ಕೂಡ  ಗೆಳತಿಯರೊಂದಿಗೆ ಬಂದು ಭಾಗವಹಿಸುತ್ತಾಳೆ(ವಿವರಗಳಿಗೆ ಪುಟ ಸಂಖ್ಯೆ.50). ದಮನಿತ ಸಮುದಾಯದ ಜನರುಗಳಾಗಿರಬಹುದು ಜಾತ್ರೆಯನ್ನು ಸಂಪನ್ನಗೊಳಿಸಲು ಎಲ್ಲರ ಸಹಕಾರ, ಸಹಬಾಳ್ವೆ ಬೇಕು ಎನ್ನುವುದನ್ನು ಕಾಣಬಹುದು. ಕೊರಗ ಸಮುದಾಯದ ವೆಂಕ, ಚನಿಯ ಇವರೆಲ್ಲ ತನ್ನ ಪಾತ್ರವನ್ನು, ಸೇವೆಯನ್ನು ಕೂಡ ಸಲ್ಲಿಸುವಂತಹುದನ್ನು ಕಾಣಬಹುದು.
ವೈದೇಹಿಯವರ ಜಾತ್ರೆಯಲ್ಲಿ ಕುಂದಾಪುರದ ಜನರ ಬದುಕು-ಬವಣೆ, ನೋವು-ನಲಿವು, ತಲ್ಲಣಗಳನ್ನು ಕಟ್ಟಿ ಕೊಡುವ ಮೂಲಕ ಜಾತ್ರೆ ಒಂದಷ್ಟು ಜೀವನಾನುಭವವನ್ನು ತಂದುಕೊಟ್ಟು ಹೋಸ ರೀತಿಯ ಅನುಭವವನ್ನು ಗಳಿಸಿಕೊಳ್ಳಬಹುದು. ಹೀಗೆ ಜಾತ್ರೆಯಲ್ಲಿ ಆಗುವ ಬದಲಾವಣೆಗಳಿಗೆ ಅದು ತೆರೆದುಕೊಳ್ಳುವ ಮೂಲಕ ಹಲವು ಬಿನ್ನತೆಯೊಂದಿಗೆ ಪ್ರಾದೇಶಿಕ ಅಸ್ಮಿತೆಯಾಗಿ ಮೂಡಿ ಬಂದಿದೆ. ಜನರ ಸಂಬಂಧವನ್ನು ಬೆಸೆಯುವ, ಸಂಬಂಧವನ್ನು ಗಟ್ಟಿಗೊಳಿಸುವ ಹಾಗು ಸೌಹಾರ್ದದ ಸೇತುವೆಯಾಗಿ ಜಾತ್ರೆಯು ನಿಲ್ಲುತ್ತದೆ. ಜಾತ್ರೆ ಎನ್ನುವುದು ಕೇವಲ ನೆನಪಾಗಿ ಇರದೆ ಪರಸ್ಪರ ವಿನಿಮಯದ ಹಾಗೂ ಸ್ನೇಹವನ್ನು ಬೆಸೆಯುವ ಜನಜಾತ್ರೆಯಾಗಿದೆ. ವೈದೇಹಿಯವರು ಕೊನೆಯಲ್ಲಿ ಹೇಳುವ ಜನ ಮರುಳೊ ಜಾತ್ರೆ ಮರುಳೊ ಎನ್ನುವ ಮೂಲಕ ಕುಂದಾಪುರ ಪ್ರದೇಶದ ಜಾತ್ರೆಯಾಗಿದೆ. ಒಟ್ಟಾರೆಯಾಗಿ ಒಂದು ಉತ್ತಮ ಕಥನ ಎಂದು ಹೇಳಬಹುದು. ಇದು ಕೇವಲ ಜಾತ್ರೆಯಲ್ಲ, ಪ್ರಾದೇಶಿಕತೆಯ  Identityಯನ್ನು ಹೇಳುವ ಜಾತ್ರೆಯಾಗಿದೆ.